UDAYAVANI NEWS
ಮಸ್ಕಿ, ಡಿಸೆಂಬರ್ 10 : ತಾಲೂಕಿನ ಹಸಮಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶಕುಂತಲಾ ಇವರ ನೇತೃತ್ವದಲ್ಲಿ ಶಾಲೆಯ ಎಸ್ ಡಿ ಎಂ ಸಿ ಸಮಿತಿಯ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಸಮಕಲ್ ನ ನೂತನ ಎಸ್ ಡಿ ಎಂ ಸಿ ಸಮಿತಿಯ ಅಧ್ಯಕ್ಷರಾಗಿ ಹುಲುಗಪ್ಪ ಛಲುವಾದಿ, ಉಪಾಧ್ಯಕ್ಷರಾಗಿ ಮಹಿಬೂಬ್ ಬೇಗಂ ಹಾಗೂ ನೂತನ ಸದಸ್ಯರಾಗಿ ವೀರಭದ್ರಯ್ಯ ಸ್ವಾಮಿ, ಮೌನೇಶ್ ಉದ್ವಾಳ್, ವೆಂಕಟೇಶ್ ಸುಳಿಬಾವಿ, ನಾಗಲಿಂಗಪ್ಪ ವಡ್ಡರ್, ಅಮರೇಶ್ ಛಲುವಾದಿ, ಭೀಮಪ್ಪ ವಡ್ಡರ್, ನಾಗಮ್ಮ ಗಂಡ ಬಸವರಾಜ, ದೇವಪ್ಪ ವಡ್ಡರ್, ಬಸ್ಸಮ್ಮ ಗಂಡ ವೀರೇಶ,ಗುರಪ್ಪ ವಡ್ಡರ್, ಪಾರ್ವತಿ ಗಂಡ ಶರಣಪ್ಪ, ಲಕ್ಷ್ಮಿ ಗಂಡ ರಮೇಶ, ರಾಜಮ್ಮ ಗಂಡ ಗಂಗಪ್ಪ, ಶಾಂತಮ್ಮ, ಮರಿಯಮ್ಮ, ಮಾರಮ್ಮ ಗಂಡ ದುರುಗಪ್ಪ ಇವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ
ಮುಖ್ಯ ಗುರುಗಳಾದ ಶಕುಂತಲಾ, ಅಂಬರೀಶ್ ಶಿಕ್ಷಕ, ರಫಿ ಶಿಕ್ಷಕ,ಉಮಾ ಶಿಕ್ಷಕಿ, ಹಾಗೂ ಊರಿನ ಮುಖಂಡರಾದ ಯಂಕಪ್ಪ, ಮುತ್ತಣ್ಣ ಚಿಲ್ಕರಾಗಿ,ಶಿವರಾಜಪ್ಪ, ಸೂಗಪ್ಪ ಬೋವಿ, ಶರಣಬಸವ ಪೂಜಾರಿ, ಹನುಮಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು