UDAYAVANI NEWS
ಬೆಂಗಳೂರು, ಡಿಸೆಂಬರ್ 28 : ರೋಟರಿ ಬೆಂಗಳೂರು ಪೀಣ್ಯ ವತಿಯಿಂದ ಹಾಗೂ ಶ್ರೀ ಭಗವಾನ್ ಮಹಾವೀರ ವಿಕಲಾಂಗ ಸಹಾಯತ ಸಮಿತಿ, ಜೈಪುರ ಸಹಯೋಗದಿಂದ 25ನೇ ವರ್ಷದ ಉಚಿತ ಕೃತಕ ಕಾಲು, ಕ್ಯಾಲಿಪರ್ ಗಳು ಹಾಗು ಮುಂಗೈ ಬೃಹತ್ ಜೋಡಣ ಶಿಬಿರ ಜನವರಿ 3 ರಿಂದ 9 ವರೆಗೆ
ಗಣೇಶ್ ಬಾಗ್, ಎಸ್.ಎಸ್.ಬಿ.ಎಸ್. ಜೈನ್ ಸಂಘ ಟ್ರಸ್ಟ್, ಭಗವಾನ್ ಮಹಾವೀರ ರಸ್ತೆ, (ಇನ್ ಫೆಂಟ್ರಿ ರಸ್ತೆ) ಶಿವಾಜಿನಗರ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
ಈ ಶಿಬಿರವು ಏಳು ದಿನಗಳ ಕಾಲ ನಡೆಯಲಿದ್ದು ಇಲ್ಲಿಗೆ ಬರುವವರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಇರುತ್ತದೆ. ಬರುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ತರಬೇಕು. ಮೊಬೈಲ್ ಸಂಖ್ಯೆ- 9845052554 ಮತ್ತು 9341214915 ನಂಬರ್ ಸಂಪರ್ಕಿಸಬೇಕೆಂದು ಲಿಂಬ್ ಕ್ಯಾಂಪ್ ಸಂಯೋಜಕ ಜಿ.ಆರ್. ವಸಂತ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tags
ರಾಜ್ಯ ಸುದ್ದಿಗಳು