UDAYAVANI NEWS
ಮಸ್ಕಿ, ಡಿಸೆಂಬರ್ 14 : ತಾಲೂಕಿನ ಮಲ್ಲದಗುಡ್ಡ, ಅಮೀನಗಡ, ಪಾಮನಕಲ್ಲೂರು ಗ್ರಾಪಂಗೆ ಮಸ್ಕಿ ತಾಪಂ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರೆಡ್ಡಿ ಮಂಗಳವಾರ ಭೇಟಿ ನೀಡಿ ಕಾಮಗಾರಿಗಳ ಪರಿಶೀಲಿಸಿದರು.
ಅಮೃತ ಗ್ರಾ.ಪಂ ಯೋಜನೆಯಡಿ ಪ್ರಗತಿಯಲ್ಲಿರುವ ಮಲ್ಲದಗುಡ್ಡ ಪ್ರೌಢಶಾಲೆ ಆಟದ ಮೈದಾನ, ಚರಂಡಿ ನಿರ್ಮಾಣ, ಭೋಜನಾಲಯ ಕಾಮಗಾರಿಯನ್ನು ಪರಿಶೀಲಿಸಿದರು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.
ಅಮೀನಗಡ ಗ್ರಾ.ಪಂ ಯ ಕೋಟೆಕಲ್ ಕೆರೆ ನಿರ್ಮಾಣ, ಪಾಮನಕಲ್ಲೂರು ಗ್ರಾ.ಪಂಯ ಚಿಲ್ಕರಾಗಿ ಹಳ್ಳದ ಹೂಳು ಎತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಕೂಲಿಕಾರ್ಮಿಕರ ಹಾಜರಾತಿಯನ್ನು ಸಮರ್ಪಕವಾಗಿ ದಾಖಲಿಸುವ ನಿಟ್ಟಿನಲ್ಲಿ ಸರ್ಕಾರ ರೂಪಿಸಿದ ಎನ್‌ಎಂಎಂಎಸ್ ತಂತ್ರಾಂಶ ಕುರಿತ ಮಾಹಿತಿ ಮತ್ತು ಅದರ ಮಹತ್ವವನ್ನು ಕೂಲಿಕಾರರ ಜೊತೆ ಹಂಚಿಕೊಂಡರು. ದಿನಕ್ಕೆ ಎರಡು ಬಾರಿ ಹಾಜರಾತಿ ತೆಗೆದುಕೊಳ್ಳಲಾಗುತ್ತದೆ. ಮೇಟಿಗಳಿಗೆ ಅಗತ್ಯ ಸಹಕಾರ ನೀಡುವ ಮೂಲಕ ಶೇ.100 ಹಾಜರಾತಿ ದಾಖಲಿಸಬೇಕು ಎಂದರು. ಕೆಲಸದ ಅವಧಿ, ಕೂಲಿ ಪಾವತಿ ಸೇರಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.
ಈ ವೇಳೆ ಮಲ್ಲದಗುಡ್ಡ ಗ್ರಾಪಂ ಪಿಡಿಒ ಸಂದೇಶ್, ಅಮೀನಗಡ ಗ್ರಾಪಂ ಪಿಡಿಒ ಷರೀಫ್ ಸಾಬ್, ತಾಂತ್ರಿಕ ಸಹಾಯಕ ಅಭಿಯಂತರ ಶಿವಕುಮಾರ ಯಾದವ್, ಕಂಪ್ಯೂಟರ್ ಆಪರೇಟರ್‌ಗಳಾದ ಮಲ್ಲಿಕಾರ್ಜುನ, ವೆಂಕಟೇಶ್, ಬಿಎಫ್ಟಿ ಮಂಜುನಾಥ, ಗ್ರಾಮ ಕಾಯಕ ಮಿತ್ರ ಬಸಲಿಂಗಮ್ಮ ಇತರರಿದ್ದರು.
Tags
ಜಿಲ್ಲಾ ಸುದ್ದಿಗಳು