UDAYAVANI NEWS
ಹುಣಸಗಿ,ಡಿಸೆಂಬರ್ 14 : ತಾಲೂಕಿನ ಕೊಡೆಕಲ್ ಹೋಬಳಿಯ ಹಗರಟಗಿ ಗ್ರಾಮದ ನಿವಾಸಿ ಶತಾಯುಷಿ ಹಿರಿಯ ಜೀವಿ ಬಾಳಮ್ಮ ಮಹಾಂತಗೌಡ ಪಾಟೀಲ್ (105) ಅವರು ಸುರಪುರದ ಹಿರಿಯ ನ್ಯಾಯವಾದಿ ಅಪ್ಪಾಸಾಹೇಬ್ ಪಾಟೀಲ್ ಅವರ ತಾಯಿಯಾಗಿದ್ದು ಬುಧವಾರ ಮಧ್ಯಾಹ್ನ ನಿಧನರಾಗಿರುತ್ತಾರೆ. ಮೃತರು ಇಬ್ಬರು ಪುತ್ರರು ಮೂರು ಜನ ಪುತ್ರಿಯರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಹಾಗೂ ಮೃತರ ಅಂತ್ಯಕ್ರಿಯೆಯು ಸ್ವ-ಗ್ರಾಮ ಹಗರಟಗಿಯ ಗ್ರಾಮದ ಲಿಂಗಾಯತ ರುದ್ರಭೂಮಿಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಗೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Tags
ಜಿಲ್ಲಾ ಸುದ್ದಿಗಳು