UDAYAVANI NEWS
ಸಿರವಾರ,ನವೆಂಬರ್ 28 : ಬಾಬಾ ಸಾಹೇಬ್ ಅಂಬೇಡ್ಕರ್ ರವರು ಧ್ವನಿ ಇಲ್ಲದವರ ಧ್ವನಿಯಾಗಿ ಭಾರತ ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ಹಕ್ಕು ಕೊಟ್ಟು ಸಮಾನತೆಯ ಹರಿಕಾರರಾಗಿದ್ದಾರೆ ಎಂದು ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ್ ಜಾನೇಕಲ್ ಹೇಳಿದರು.
ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಹಮ್ಮಿಕೊಂಡ ಬಹುತ್ವ ಭಾರತಕ್ಕಾಗಿ ನಾವು ಸಂವಿಧಾನದ ಜೊತೆ ಜೊತೆಯಲಿ ಎಂಬ 10ನೇ ವಸತಿ ನಿಲಯ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ವ್ಯಕ್ತಿಗಳಿಗೂ ಸ್ತ್ರೀಯರಿಗೂ ಸಮಾನವಾಗಿ ಹಕ್ಕುಗಳನ್ನು ಸಂವಿಧಾನದ ಮೂಲಕ ಕಲ್ಪಿಸಿದಂತ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸಲ್ಲುತ್ತದೆ ಜೊತೆಗೆ ಜಾತಿ, ಮತ, ಪಂಥ ಮತ್ತು ಧರ್ಮ ಹಾಗೂ ಹೆಣ್ಣು ಗಂಡು ಎಂದು ಭಿನ್ನ ಭೇದಗಳನ್ನು ಲೆಕ್ಕಿಸದೆ ಭಾರತ ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜೆಗಳಿಗೆ ಸಮಾನವಾಗಿ ಹಕ್ಕುಗಳನ್ನು ಕಲ್ಪಿಸಿ ಸದೃಢರಾಗುವಂತೆ ಹಾಗೂ ಉತ್ತಮ ಜೀವನವನ್ನು ನಡೆಸಲು ಬಾಬಾ ಸಾಹೇಬರೇ ಕಾರಣಿಕರ್ತರು ಹೀಗಾಗಿ ಬಾಬಾ ಸಾಹೇಬರು ಬರೆದಂತ ಸಂವಿಧಾನವನ್ನು ನಾವೆಲ್ಲರೂ ರಕ್ಷಿಸಬೇಕೆಂದು ಲಕ್ಷ್ಮಣ್ ಜಾನೇಕಲ್ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ನಂತರ ಹೈದ್ರಾಬಾದ್ ಕರ್ನಾಟಕ ಭಾಗದ ಪ್ರಾದೇಶಿಕ ಅಸಮಾನತೆಯನ್ನು ತೊಲಗಿಸಲು ಹಾಗೂ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಲು ವಿದ್ಯಾರ್ಥಿ ಒಕ್ಕೂಟದ ಸಂಘಟನೆಗಳ ಕಾರ್ಯವು ಪ್ರಮುಖವಾಗಿದೆ ಜೊತೆಗೆ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯವನ್ನು ರೂಪಿಸಿ ಅವರನ್ನು ಸದೃಢರನ್ನಾಗಿ ಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀಶೈಲ ಗೌಡರು ಮಾತನಾಡಿದರು.
ನಂತರ ಪತ್ರಕರ್ತರಾದ ರವಿಶರ್ಮಾ, ಉಪನ್ಯಾಸಕರಾದ ಬಸವನಗೌಡ, ಶಿವಶಂಕರ್ ಮತ್ತು ಮಲಕಾರಪ್ಪ ತುಬಚಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಾಬಾ ಸಾಹೇಬರ ಕೊಡುಗೆಗಳಿಂದಲೇ ನಮ್ಮ ಜೀವನ ಸಾಗಿದೆ ಮತ್ತು ಸಾಗುತ್ತಲಿದೆ ಎಂದು ಹೇಳಿ ನಂತರ ವೇದಿಕೆ ಮೇಲಿದ್ದ ಎಲ್ಲಾ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಂ.ಮಲ್ಲೇಶ ಮಾಚನೂರು ವಕೀಲರು ಸಂಸ್ಥಾಪಕ ರಾಜ್ಯಾಧ್ಯಕ್ಷರು ಹೈದ್ರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟ, ಹನುಮಂತ ಬ್ಯಾಗವಾಟ್ ವಕೀಲರು ಮತ್ತು ಪತ್ರಕರ್ತರು, ರವಿ ಆಲ್ದಾಳ ಪತ್ರಕರ್ತರು, ಮೌನೇಶ ಕೋರಿ ಜಿಲ್ಲಾ ಸಂಚಾಲಕರು ಭೀಮವಾದ ಡಿಎಸ್ಎಸ್, ಶಿವಾನಂದ ಉಪನ್ಯಾಸಕರು, ಶಿವಶಂಕರ್ ಉಪನ್ಯಾಸಕರು, ಬಸನಗೌಡ ಉಪನ್ಯಾಸಕರು, ಮೆಹಬೂಬ್ ಮಾಚನೂರು, ನಿಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಇದ್ದರು.
Tags
ಜಿಲ್ಲಾ ಸುದ್ದಿಗಳು