UDAYAVANI NEWS
ಚಿಂಚೋಳಿ, ಏಪ್ರಿಲ್ 09 : ತಾಲೂಕಿನ ನಾಗಾಯಿದ್ಲಾಯಿ ಗ್ರಾಮದಲ್ಲಿ ಯುವಕರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸುಭಾಶ ರಾಠೋಡ ನೇತೃತ್ವದಲ್ಲಿ ಕೈ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿಜೆಪಿ ತೊರೆದ ಯುವ ಮುಖಂಡರಾದ ರಜಿನಿಕಾಂತ ಮೀನಕೇರಾ ರಾಜು ಮೀನಕೇರಾ ಸತೀಶ ಮಂಜುನಾಥ ರೆಡ್ಡಿ ಸಂದೀಪ ಪಾಟೀಲ ಚಿರು ಇಸ್ಬಿ ಚಿನ್ನ ಪಾಟೀಲ ವೀರೇಂದ್ರ ಪಾಟೀಲ ರವಿಕಾಂತ ಪಾಟೀಲ ಪ್ರಕಾಶ ಗೋಸುಲ್ ಸೇರಿದಂತೆ ಇತರೆ ಯುವಕರನ್ನು ರಾಠೋಡ ಕಾಂಗ್ರೇಸ್ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷ ಬಸವರಾಜ ಮಲಿ ಅಜೀತ ಪಾಟೀಲ ಮಹ್ಮದ ಹುಸೇನ್ ನಾಯ್ಕೊಡಿ ಲಕ್ಷ್ಮಿದೇವಿ ಕೊರವಿ ಸುರೇಶ ಭಂಟಾ ನಾಗೇಶ ಗುಣಾಜಿ ಬಸವರಾಜ ವಾಡಿ ಭೀಮರೆಡ್ಡಿ ಬುಡರೆಡ್ಡಿ ವೀರಶೆಟ್ಟಿ ಪಾಟೀಲ ಶೇಖ್ ಫರೀದ ಪರ್ಗಿ ನಾಗಶೆಟ್ಟಿ ಕೇಶ್ವಾರ ರಾಜಶೇಖರ ಸಜ್ಜನ್ ಬಸೀರ್ ಪರ್ಗಿ ಮುನೀರ ಪಟೇಲ ಹಾಫೀಜ್ ಪಟೇಲ ವೀರೇಂದ್ರಪ್ಪ ಕಟ್ಟೊಳ್ಳಿ ಸೇರಿದಂತೆ ಇತರರು ಹಾಜರಿದ್ದರು.
Tags
ಜಿಲ್ಲಾ ಸುದ್ದಿಗಳು