UDAYAVANI NEWS
ಮಸ್ಕಿ, ಏಪ್ರಿಲ್ 02 : ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಹಾಲಾಪೂರು ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಮಂಡಲ ಅಧ್ಯಕ್ಷರಾದ ಶಿವಪುತ್ರಪ್ಪ ಅರಳಹಳ್ಳಿ ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಮಾಹಾ ದೇವಪ್ಪ ಗೌಡ ಪೊಲೀಸ್ ಪಾಟೀಲ್, ಜಗದೀಶ್ ಹಾಲಾಪುರ್ ಇವರ ನೇತೃತ್ವದಲ್ಲಿ ಹಾಲಾಪುರ ಗ್ರಾಮದ ಕಾಂಗ್ರೇಸ್ ಕಾರ್ಯಕರ್ತರಾದ ಮಲ್ಲಯ್ಯ ಸ್ವಾಮಿ ಮಾಜಿ PSSN ನಿರ್ದೇಶಕರು, ಗೂಳಯ್ಯ ಸ್ವಾಮಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕ ಮರಾಠ ಸಮಾಜದ ಉಪಾಧ್ಯಕ್ಷರಾದ ಮೌನೇಶ್ ಮರಾಠ, ಮಲ್ಲಣ್ಣ ಬಡಿಗೇರಿ,ಸುರೇಶ್ ಕಟ್ಟಿಮನಿ, ಯಂಕಪ್ಪ ಮಡಿವಾಳ,ಅಮರಪ್ಪ ಮಾಲಿಪಾಟೀಲ್, ಶಾಂತಯ್ಯ ಸ್ವಾಮಿ ದಿನ್ನಿ, ಯಲ್ಲಪ್ಪ ದೇಸಾಯಿ, ವೀರನಗೌಡ ಮಾಲಿಪಾಟೀಲ್ ಹಾಲಾಪುರ್, ತಮ್ಮ ಬೆಂಬಲಿಗರೊಂದಿಗೆ ಭಾರತೀಯ ಜನತಾ ಪಾರ್ಟಿ ಪಕ್ಷವನ್ನು ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ, ಗವಿಸಿದ್ದಪ್ಪ ಸಾಹುಕಾರ್, ಚೇತನ್ ಪಾಟೀಲ್ , ಯೋಗೀಶ್ ಧಣಿ
ಹಾಲಾಪುರ್, ಮಲ್ಲಣ್ಣ ರೇವಣಕಿ ಹಾಲಪುರ್, ಚಂದಪ್ಪ ಹಾಲಾಪುರ್, ಗ್ರಾಮದ ಪಕ್ಷದ ಹಿರಿಯ ಮುಖಂಡರು ವೀರನಗೌಡ ಮಾಲಿ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರು ಶಂಕ್ರಪ್ಪ ಗೌಡ, ವೆಂಕಪ್ಪ ನಾಯಕ್, ನಾಗೇಶ್ ನಾಯಕ್ ಪಕ್ಷಸೇರ್ಪಡೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು