UDAYAVANI NEWS
ಮಸ್ಕಿ,ಮಾರ್ಚ್ 07 : ಪಟ್ಟಣದ ಭವಾನಿ ಹೆರಿಗೆ & ವಿಜಯ ಹೆರಿಗೆ ಆಸ್ಪತ್ರೆಯಲ್ಲಿ ಜಯಕರ್ನಾಟಕ ರಾಜ್ಯಾಧ್ಯಕ್ಷರಾದ ಡಾಕ್ಟರ್ ಬಿ.ಎನ್ ಜಗದೀಶ್ ರವರ 45ನೇ ಹುಟ್ಟು ಹಬ್ಬದ ಅಂಗವಾಗಿ ಜಯಕರ್ನಾಟಕ ಮಸ್ಕಿ ತಾಲೂಕ ಸಂಘಟನೆಯ ವತಿಯಿಂದ ಹಾಲು ಬ್ರೆಡ್ ವಿತರಿಸಲಾಯಿತು.
ಜಯಕರ್ನಾಟಕ ರಾಜ್ಯಾಧ್ಯಕ್ಷರು ಹಾಗೂ ಹುಟ್ಟು ಹೋರಾಟಗಾರರು ಸಂಘಟನಾ ಚತುರರು ಉತ್ತಮ ಭಾಷಣಕಾರರಾದ ಡಾಕ್ಟರ್ ಬಿ.ಎನ್ ಜಗದೀಶ್ ರವರ 45ನೇ ಹುಟ್ಟು ಹಬ್ಬದ ಅಂಗವಾಗಿ ಮಸ್ಕಿ ತಾಲೂಕ ಸಂಘಟನೆಯ ವತಿಯಿಂದ ಭವಾನಿ ಹೆರಿಗೆ ಆಸ್ಪತ್ರೆ & ವಿಜಯ ಹೆರಿಗೆ ಆಸ್ಪತ್ರೆಯ ರೋಗಿಗಳಿಗೆ ಹಾಲು ಬ್ರೆಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಸ್ಕಿ ತಾಲ್ಲೂಕು ಅಧ್ಯಕ್ಷರಾದ
ಕಿರಣ್.ವಿ.ಮುರಾರಿ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಗೋಗಿ, ನಗರ ಆಟೋಚಾಲಕರ ಅಧ್ಯಕ್ಷರಾದ ದುರುಗಪ್ಪ ಮಸ್ಕಿ, ಆಟೋ ಚಾಲಕ ಸಂಘದ ಸದಸ್ಯರಾದ ವೀರೇಶ್ ಪೂಜಾರಿ, ಹುಲ್ಲೂರ ಸಲೀಂ ಗೋನಾಳ್, ಬಂದೇನವಾಜ್ ಆಟೋ, ಮಾರುತಿ ಹಿರೇಕಡಬೂರ, ಅಕ್ಬರ್ ಗೋನಾಳ್, ಹಿಮಾಮ್ ಸಾಬ್ ಗೋನಾಳ್, ಮಂಜುನಾಥ್ ಹುಲ್ಲೂರ, ರವಿ ಡಿಸ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು