ಬ್ಲಾಕ್ ಕಾಂಗ್ರೇಸ್ ನಗರ ಘಟಕ ಅಧ್ಯಕ್ಷರಾಗಿ ಮಲ್ಲಯ್ಯ ಮುರಾರಿ ಎರಡನೇ ಬಾರಿ ಮರು ಆಯ್ಕೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ,ಮಾರ್ಚ್ 26 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರ ಸೂಚನೆ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಆರ್ ಧರ್ಮ ಸೇನಾ ರವರ ಆದೇಶದಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ ವಿ ನಾಯಕ್ ಇವರ ಅನುಮೋದನೆ ಮೇರೆಗೆ ಸತತ ಎರಡನೇ ಬಾರಿಗೆ ಮಸ್ಕಿ ನಗರ ಘಟಕದ ಅಧ್ಯಕ್ಷರನ್ನಾಗಿ ಮಲ್ಲಯ್ಯ ಮುರಾರಿ ಮರು ಆಯ್ಕೆ.


ಪಟ್ಟಣದ ಗ್ರೀನ್ ಸಿಟಿಯ ಶಾಸಕರ ನಿವಾಸದಲ್ಲಿ ಆಯೋಜಿಸಲಾಗಿದ್ದ ಬ್ಲಾಕ್ ಕಾಂಗ್ರೇಸ್ ಎಸ್ಸಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರುವಿಹಾಳ ರವರು ಹಾಗೂ ಬ್ಲಾಕ್ ಕಾಂಗ್ರೇಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ವಹಿಸಿದ್ದರು. ರಾಜ್ಯ ಮತ್ತು ಜಿಲ್ಲಾ ಕಾಂಗ್ರೇಸ್ ಸಮಿತಿಯ ಆದೇಶದಂತೆ ರಾಯಚೂರು ಜಿಲ್ಲೆಯ ಎಸ್ಸಿ ಘಟಕದ ಅಧ್ಯಕ್ಷರಾದ ಹನುಮಂತ ಜೂಕೂರು ಇವರು ಮಸ್ಕಿ ನಗರದಾದ್ಯಂತ ಪಕ್ಷದ ಬೆಳವಣಿಗೆ ಹಾಗೂ ಪ್ರಾಮಾಣಿಕ ನಿಷ್ಠೆಯ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ತಾಲೂಕ ಬ್ಲಾಕ್ ಕಾಂಗ್ರೇಸ್ ಸಮಿತಿಯ ಒಮ್ಮತದ ಮೇರೆಗೆ ಸತತ ಎರಡನೇ ಬಾರಿಗೆ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಮಸ್ಕಿ ನಗರ ಘಟಕದ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಲಾಯಿತು. ನಂತರ ಮಾತನಾಡಿದ ಮಲ್ಲಯ್ಯ ಮುರಾರಿ ಪಕ್ಷವೂ ನನ್ನ ಮೇಲಿನ ನಂಬಿಕೆಯಿಂದ ನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಮಾಡುವ ಮೂಲಕ ನೀಡಲಾದ ಜವಾಬ್ದಾರಿಯನ್ನು ನಾನು ನಿಷ್ಠೆ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ.



Post a Comment

Previous Post Next Post