ಸಮುದಾಯ ಆಧಾರಿತ ಆರೋಗ್ಯ ಜಾಗ್ರತೆ ಕಾರ್ಯಕ್ರಮ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ವಿಜಯನಗರ, ಮಾರ್ಚ್ 09 : ಜಿಲ್ಲೆ ಕೂಡ್ಲಿಗಿ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅಮರ ದೇವರ ಗುಡ್ಡ ಗ್ರಾಮದಲ್ಲಿ. ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಐಸಿಟಿಸಿ, ಜಿಲ್ಲಾ ಹೆಚ್.ಐ.ವಿ ಏಡ್ಸ್ ನಿರ್ಮೂಲನ ಇಲಾಖೆ. ಸ್ಥಳೀಯ ಆಡಳಿತ ಸಹಯೋದಲ್ಲಿ. ಸಮುದಾಯ ಆಧಾರಿತ ಆರೋಗ್ಯ ಜಾಗ್ರತೆ, ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೆಚ್.ಐ.ವಿ, ಏಡ್ಸ್ ರೋಗದ ಬಗ್ಗೆ ಜಾಗ್ರತೆ ಮೂಡಿಸಲಾಯಿತು, ರಕ್ತ ಗುಂಪು ಮಾದರಿ ಪರೀಕ್ಷೆ, ಹಾಗೂ ರಕ್ತದೊತ್ತಡ, ಸಕ್ಕರೆ ಪ್ರಮಾಣ ಪತ್ತೆ ಪರೀಕ್ಷೆ ಮಾಡಲಾಯಿತು. ಗ್ರಾಮದ ಜನತೆಯಲ್ಲಿ ವೈಯಕ್ತಿಕ ಸ್ವಚ್ಚತೆ ಹಾಗೂ ಸಮೂಹಿಕ ಸ್ವಚ್ಚತೆ ಕುರಿತು, ಮತ್ತು ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವ ಕುರಿತು ಜಾಗ್ರತೆ ಮೂಡಿಸಲಾಯಿತು. ಆರೋಗ್ಯ ಇಲಾಖೆ ಹಾಗೂ ಐಸಿಟಿಸಿ ಸಿಬ್ಬಂದಿ ಹಾಜರಿದ್ದರು,ಮಹಿಳೆಯರು,ಮಕ್ಕಳು,ವೃದ್ಧರು, ಯುವಕರು,ಗರ್ಭಿಣಿಯರು, ನಾಗರೀಕರು, ಗ್ರಾಮಸ್ಥರು ಭಾಗವಹಿಸಿದ್ದರು.

Post a Comment

Previous Post Next Post