ವರದಿ : ಬಿ.ಎಸ್. ಗಿರೀಶ್
ಹುಣಸಗಿ, ಮಾರ್ಚ್ 20 : ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿರುವ ಬೆನ್ನಲ್ಲೇ ಪಟ್ಟಣದಲ್ಲಿ ಇಂದು ಚಂದ್ರಶೇಖರ್ ದಂಡಿನ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವಿಂದು ಪಟ್ಟಣದ ಶ್ರೀ ನೀಲಕಂಠೇಶ್ವರ ಕಲ್ಯಾಣ ಮಂಟಪದ ಮೈದಾನದಲ್ಲಿ ಹಮ್ಮಿಕೊಂಡಿದ್ದು , ಈ ಕಾರ್ಯಕ್ರಮದಿಂದ ಮತ್ತಷ್ಟು ಪಕ್ಷದ ಕಾರ್ಯಕರ್ತರಲ್ಲಿ ಆತ್ಮ ಸ್ಥೈರ ತುಂಬುವ ಕಾರ್ಯಕ್ಕೆ ಕೈ ನಾಯಕರು ಕೈ ಹಾಕಿದ್ದು , ಈ ಮೂಲಕ ಆಡಳಿತ ಪಕ್ಷದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿರುವ ಸಾಹುಕಾರ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಇಭಾರಿ ಶತಾಯ ಗತಾಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ವಿಧಾನ ಸಭೆ ಚುನಾವಣೆಯಲ್ಲಿ ಭರ್ಜರಿ ಮತಗಳ ಅಂತರದಿಂದ ಗೆಲ್ಲಿಸುವ ಪಣತೊಟ್ಟಿದ್ದು , ಈ ಕುರಿತು ಮಾತನಾಡಿರುವ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ , ತಾಲೂಕಿನಲ್ಲಿ ಭೂತ್ ಮಟ್ಟದಿಂದ ಸದೃಡ ಗೊಳಿಸುವ ಡೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲಿದ್ದು , ಇಂದಿನಿಂದಲೇ ತಾಲೂಕಿನ ಎಲ್ಲಾ ಹಿರಿಯ ಹಾಗೂ ಕಿರಿಯ ಮುಖಂಡರನ್ನು ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರೊಡನೆ ಮಾತನಾಡಿ ನಮ್ಮ ನಾಯಕರಾದ ರಾಜಾ ವೇಂಕಟಪ್ಪ ನಾಯಕರ ಮಾರ್ಗದರ್ಶನದಲ್ಲಿ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿಯು ಪಕ್ಷವನ್ನು ಬೇರು ಸಮೇತ ಗಟ್ಟಿಗೋಳಿಸುವುದಾಗಿ ತಿಳಿದಿದ್ದಾರೆ.
ಬಹುದಿನಗಳಿಂದ ಇಲ್ಲಿನ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹಿ ತಾಲೂಕು ಅಧ್ಯಕ್ಷರ ಕೊರತೆ ಕಾಡುತ್ತಿತ್ತು ಇದೀಗ ರಾಜಕೀಯ ಮನೆತನದ ಹಾಗೂ ರಾಜಕೀಯ ರಂಗದಲ್ಲಿ ಅನುಭವಿಯಾಗಿ ಗ್ರಾಮ ಪಂಚಾಯತಿ ಮತ್ತು ಎಪಿ.ಎಂಸಿ. ಅಧ್ಯಕ್ಷರು ಆಗಿ ಪಕಗಷದಲ್ಲಿ ಕಾರ್ಯನಿರ್ವಹಿಸು ಮೂಲಕ ಕ್ಷೇತ್ರದ ಜನತೆಯೋಂದಿಗೆ ಉತ್ತಮ ಒಡನಾಟ ಹೊಂದಿರುವ ಚಂದ್ರಶೇಖರ ದಂಡಿನ್ ಕುಗ್ಗಿರುವ ಕಾರ್ಯಕರ್ತರನ್ನು ಸದೃಡಗೋಳಿಸಿ ಪಕ್ಷವನ್ನು ಕಟ್ಟುವ ಕಾರ್ಯದಲ್ಲಿ ಯಾವರೀತಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೊ , ಕಾದು ನೋಡಬೇಕಿದೆ.
Tags
ಜಿಲ್ಲಾ ಸುದ್ದಿಗಳು