UDAYAVANI NEWS
ಲಿಂಗಸ್ಗೂರು, ಮಾರ್ಚ್ 08 : ತಾಲೂಕಿನ ಸುಕ್ಷೇತ್ರ ಶ್ರೀ ಗುರುಗುಂಟಾ ಅಮರೇಶ್ವರ ಜಾತ್ರೆಯಲ್ಲಿ ಲಿಂಗಸ್ಗೂರಿನ ಶ್ರೀ ಮತಿ ಬಸಮ್ಮ ಗುರುಲಿಂಗಪ್ಪ ಕಾನೂನು ಮಹಾವಿದ್ಯಾಲಯ ವತಿಯಿಂದ ಮೂರು ದಿನಗಳ ಕಾನೂನು ಸೇವೆಗಳ ಚಿಕಿತ್ಸಾಲಯ ಶಿಬಿರ ನಡೆಯಿತು. ಗುರುಗುಂಟಾ ಅಮರೇಶ್ವರ ಜಾತ್ರೆಯಲ್ಲಿ ಮಾ.6 ರಿಂದ 9 ರವರೆಗೆ ಮೂರು ದಿನಗಳ ಕಾಲ ಜನ ಸಾಮಾನ್ಯರಿಗೆ ಆಸ್ತಿ ವಿವಾದ ,ಕುಟುಂಬ ಕಲಹ ,ಭ್ರಷ್ಟಾಚಾರ ,ವರದಕ್ಷಿಣೆ ಕಿರುಕುಳ ,ಪೋಲಿಸ್ ಠಾಣೆಯಲ್ಲಿ ಎಫ್.ಐ .ಆರ್ ದಾಖಲು ,ಜೀವನಾಂಶ ,ಹಿದೂ ಕಾಯ್ದೆ ,ಪ್ರತಿಯೊಂದನ್ನು ಸವಿವರವಾಗಿ ಯಾವ ಯಾವ ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಮತ್ತು ಬೇಲ್ ತೆಗೆಸುವದು ಎಂಬುದರ ಕುರಿತು ಸವಿವರವಾಗಿ ಕಾನೂನು ಕಾಲೇಜಿನ ಪ್ರಾಚಾರ್ಯರು ,ಉಪನ್ಯಾಸಕರು ,ವಿದ್ಯಾರ್ಥಿಗಳು ತಿಳಿಸಿ ಜನರಿಗೆ ಕಾನೂನು ಗಳ ಬಗ್ಗೆ ಭಯ ಬೇಡ ಜಾಗೃತಿ ಇರಲಿ ಎಂಬುದನ್ನು ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ
ಕಾಲೇಜಿನ ಅಧ್ಯಕ್ಷರಾದ ಸಂಜೀವ ಕುಮಾರ ,ಪ್ರಾಚಾರ್ಯರಾದ ಅಮರೇಶ ಗೌಡುರು ,ಉಪನ್ಯಾಸಕರಾದ ಗೌತಮ ವಾಲೇಕರ್ ,ವೆಂಕಟೇಶ ,ವಿದ್ಯಾರ್ಥಿಗಳಾದ ಲಕ್ಷ್ಮಣ ಕೆ.,ಅನೀಲ ಕುಮಾರ,ಪಂಪಾಪತಿ ಬಿ.ಹೂವಿನ ಬಾವಿ ,ರಾಘವೇಂದ್ರ ,ವೆಂಕಟೇಶ್ ಕ್ಷತ್ರೀಯ ,
ಅಂಬುಜಾ,ಚಂದ್ರಮತಿ ,ಛಾಯಾ ,ವೆಂಕಟೇಶ ,ಬಸವರಾಜ ,ಅಮರೇಶ ಸೇರಿದಂತೆ ಪ್ರಥಮ ,ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
Tags
ಜಿಲ್ಲಾ ಸುದ್ದಿಗಳು