UDAYAVANI NEWS
ವಿಜಯನಗರ, ಮಾರ್ಚ್ 28 : ಜಿಲ್ಲೆ, ಕೊಟ್ಟೂರು ತಾಲೂಕು ಗ್ರಾಮ ಪಂಚಾಯಿತಿ ತೂಲಹಳ್ಳಿ ಕ್ಯಾಂಪಿಗೆ ಸೇರಿದ ಶಾಲಾ ಮುಂದೆ ಮೂರರಿಂದ ನಾಲ್ಕು ವರ್ಷಗಳಿಂದ ಎಲ್ಲಾ ಮನೆಗಳ ಕೊಳಕು ನೀರು ಪಿಡಬ್ಲ್ಯೂಡಿ ರಸ್ತೆಗೆ ಅರೆ ಬಿಟ್ಟಿರುವುದು ಸಾರ್ವಜನಿಕರು ಸಂಚಾರಕ್ಕೆ ತೊಂದರೆಯಾಗಿದೆ ಇಲ್ಲಿ ಅನೇಕ ಬಾರಿ ದ್ವಿಚಕ್ರ ವಾಹನಗಳ ಬೀಳುವುದು ಹೇಳುವುದು ಆಗಿದೆ ಅದರಲ್ಲಿ ಈ ವಿಡಿಯೋದಲ್ಲಿರುವ ಬೈಕ್ ಸವಾರನ್ನು ಬಿದ್ದಿರುವುದು ಕಾಣಬಹುದು ಇದರ ಬಗ್ಗೆ ಅನೇಕ ಬಾರಿ ಗ್ರಾಮ ಪಂಚಾಯತಿಯ ಪಿಡಿಒ ಮತ್ತು ಅಧ್ಯಕ್ಷ ಮತ್ತು ಸದಸ್ಯರುಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಿಲ್ಲ ಇದಲ್ಲದೆ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರು ಶಾಲಾ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಬಂದು ನೋಡಿದ್ದರು ಕಂಡರೂ ಕಾಣದಂತೆ ಇರುವುದು ಸಾರ್ವಜನಿಕರಿಗೆ ಬೇಸರವಾಗಿದೆ ಆದಕಾರಣ ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಪ್ರಶಾಂತ್ ಎಂ ಪೀಡಿಒ ಇವರಿಗೆ ಎಚ್ಚರಿಕೆ ಕೊಡಬೇಕು ಇಲ್ಲದಿದ್ದರೆ ಮುಂದಾಗುವ ತೊಂದರೆಗಳಿಗೆ ಕಾರಣಕರ್ತರು ನೀವಾಗಿರುತ್ತೀರಿ ಎಂದು ಮಲ್ಲಿಕಾರ್ಜುನ ಆಕಾಶ ಗುರುಬಸವರಾಜ ಕುಬೇರ ಇನ್ನು ಮುಂತಾದವರು ಈ ಕಲುಷಿತ ನೀರನ್ನು ಚರಂಡಿ ಮಾಡುವುದರ ಮೂಲಕ ಸರಿಪಡಿಸಿಕೊಡಬೇಕೆಂದು ನಮ್ಮ ಸುದ್ದಿವಾಹಿನೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.
Tags
ಜಿಲ್ಲಾ ಸುದ್ದಿಗಳು