ನರಸಿಂಹಗಿರಿ ಶ್ರೀಮಾತೆ ದುರ್ಗಾದೇವಿ ಜಾತ್ರೆ: ಸಮಾಜ ಸೇವಕ,ವೈದ್ಯ ಎನ್.ಟಿ. ಶ್ರೀನಿವಾಸ್ ರಿಂದ ಬೃಹತ್ ಅನ್ನ ಸಂತರ್ಪಣೆ ಸಾವಿರಾರು ಭಕ್ತರು ಭಾಗಿ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ವಿಜಯನಗರ, ಮಾರ್ಚ್ 02 : ಜಿಲ್ಲೆ ಕೂಡ್ಲಿಗಿ ತಾಲೂಕು, ಸಮಾಜ ಸೇವಕ ಹಾಗೂ ವೈದ್ಯರಾದ ಎನ್.ಟಿ.ಶ್ರೀನಿವಾಸ ರ ಹುಟ್ಟೂರಾದ ನರಸಿಂಹಗಿರಿ ಗ್ರಾಮದಲ್ಲಿ. ಶ್ರೀಮಾತೆ ಜರ್ಮಲಿ ದುರ್ಗಮ್ಮ ಜಾತ್ರೆ ಜರುಗಿತು, ಜಾತ್ರೆ ಪ್ರಯುಕ್ತ ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿಬಳಗದ ವತಿಯಿಂದ. ಗ್ರಾಮಸ್ಥರಿಗಾಗಿ ಹಾಗೂ ಶ್ರೀದುರ್ಗಮ್ಮ ದೇವಿಯ ಸಮಸ್ತ ಭಕ್ತರಿಗಾಗಿ, ಅನ್ನ ಸಂತರ್ಪಣೆ ಸೇವೆ ಏರ್ಪಡಿಸಲಾಗಿತ್ತು. ಅನ್ನ ಸಂತರ್ಪಣೆಯಲ್ಲಿ ಸಮಾಜ ಸೇವಕರು ಹಾಗೂ ವೈದ್ಯರಾದ ಎನ್.ಟಿ.ಶ್ರೀನಿವಾಸ, ಮತ್ತು ಅವರ ಸಹೋದರನಾದ ಹಾಗೂ ವಾಲ್ಮೀಕಿ ಯುವ ಮುಖಂಡರಾದ ಎನ್.ಟಿ.ತಮ್ಮಣ್ಣ ನವರ ಆಹ್ವಾನದ ಮೇರೆಗೆ. ನರಸಿಂಹಗಿರಿ ಗ್ರಾಮಸ್ಥರು, ನೆರೆ ಹೊರೆ ಗ್ರಾಮಗಳ ಮತ್ತು, ಕೂಡ್ಲಿಗಿ ಪಟ್ಟಣದ ನೂರಾರು ನಾಗರೀಕರು,ತಾಲೂಕಿನ ವಿವಿದೆಡೆಯಿಂದ ಆಗಮಿಸಿದ್ದ ನೂರಾರು ಮುಖಂಡರು, ಗಣ್ಯರು, ವಿವಿದ ಸಮಾಜದ ಮುಖಂಡರು, ಸಮಾಜ ಸೇವಕರು, ಶ್ರೀದುರ್ಗಮ್ಮ ದೇವಿಯ ಸಾವಿರಾರು ಭಕ್ತರು. ಮಾಜಿ ಶಾಸಕರಾದ ದಿ"ಎನ್.ಟಿ.ಬೊಮ್ಮಣ್ಣನವರ ಅಭಿಮಾನಿಗಳು,ಸ್ನೇಹಿತರು, ಎನ್.ಟಿ.ಶ್ರೀನಿವಾಸ ರ ಅಭಿಮಾನಿಗಳು. ಎನ್.ಟಿ.ತಮ್ಮಣ್ಣವರ ಹಿತೈಷಿಗಳು ಅಭಿಮಾನಿಗಳು, ಸ್ನೇಹಿತರು ಬೃಹತ್ ಅನ್ನ ಸಂತರ್ಪಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.

Post a Comment

Previous Post Next Post