ಮಸ್ಕಿಯಲ್ಲಿ ಯುಗಾದಿ ಪಾಡ್ಯದ ಪಂಚಾಂಗ ಶ್ರವಣ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಮಾರ್ಚ್ 23 : ಹಲವು ವರ್ಷಗಳಿಂದ ಯುಗಾದಿಯ ದಿನ ಪಂಚಾಂಗ ಶ್ರವಣ ಮಾಡುವ ವಾಡಿಕೆ ಇದೆ. ಇದೊಂದು ಸಂಪ್ರದಾಯದಂತೆ ನಡೆದು ಬಂದಿದೆ. ಎಂದು ಕಬಾಳಿಮಠದ ಪೂಜ್ಯರಾದ ಶ್ರೀ ಶರಣಯ್ಯ ಬ್ರಹ್ಮನ ಮಠ 
 ರವರು ಹೇಳಿದರು.  

ಪಟ್ಟಣದ ದೈವದ ಕಟ್ಟೆಯ ಹತ್ತಿರ ಸತತ ವಾಗಿ ಹತ್ತು ವರ್ಷಗಳಿಂದ ಪಂಚಾಂಗ ಪಠಣ ಮಾಡಲಾಗುತ್ತದೆ 
ನಮ್ಮ ಜಗತ್ತು ಸದಾ ಚಲನಶೀಲ. ಕಾಲವೆಂಬುದು ಓಡುತ್ತಲೇ ಇರುತ್ತದೆ. ಅದರ ಆಧಾರದಲ್ಲಿಯೇ ಜಗತ್ತು ನಡೆಯುತ್ತಿದೆ. ಹೀಗೆ ಕಾಲಗಣನೆಗೆ ಸೂರ್ಯ
ನ ಚಲನೆ, ಭೂಮಿ, ಚಂದ್ರರ ಚಲನೆ, ಗ್ರಹಗಳ ಚಲನೆ ಎಲ್ಲವೂ ಒಳಪಡುತ್ತವೆ. ಹೀಗೆ ಈ ಎಲ್ಲ ಜಗತ್ ಸೃಷ್ಟಿಯ ಮೂಲಗಳ ಚಲನೆಯ ಆಧಾರದ ಮೇಲೆ ಪಂಚಾಂಗ ರಚಿಸಲಾಗುತ್ತದೆ. 
ಯುಗಾದಿಯ ಪಾಡ್ಯದ ದಿನ ಈ ಪಂಚಾಂಗ ಪಠಣ ಹಾಗೂ ಶ್ರವಣದಿಂದ ಅಧಿಕ ಲಾಭವಿದೆ ಎಂಬ ನಂಬಿಕೆ ಇದೆ. ಅಂದು ಪಂಚಾಂಗ ಶ್ರವಣ ಮಾಡುವುದರಿಂದ ಸುಖ, ಐಶ್ವರ್ಯ, ಯಶಸ್ಸು
ಹೆಚ್ಚುತ್ತದೆ ಎನ್ನಲಾಗುತ್ತದೆ. ಹಾಗಾಗಿ ಪಂಚಾಂಗ ಶ್ರವಣವು ಮಹಾಭಾರತ ಕಾಲದಿಂದಲೂ ಸಂಪ್ರದಾಯವಾಗಿ ನಡೆದು ಬಂದಿದೆ. ಬಹಳಷ್ಟು ಕಡೆ ದೇವಾಲಯಗಳಲ್ಲಿ ಯುಗಾದಿಯ ಬೆಳಗ್ಗೆ ಹಾಗೂ ಸಂಜೆ ಸಾಮೂಹಿಕವಾಗಿ ಪಂಚಾಂಗ ಪಠಣ ಕಾರ್ಯಕ್ರಮಗಳು ನಡೆಯುತ್ತವೆ. ಇಷ್ಟಕ್ಕೂ ಯುಗಾದಿಯ ದಿನ ನಾವೇಕೆ ಪಂಚಾಂಗ ಶ್ರವಣ ಮಾಡುತ್ತೇವೆ ಎಂದರೆ
ಯುಗಾದಿ ಎಂದರೆ ಯುಗದ ಆದಿ. ಬ್ರಹ್ಮನು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ದಿನ. ಒಂದು ಯುಗಾದಿಯಿಂದ ಮತ್ತೊಂದು ಯುಗಾದಿಗೆ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಇದನ್ನು ವಿಜ್ಞಾನ ಕೂಡಾ ಅನುಮೋದಿಸುತ್ತದೆ. ಹಾಗಾಗಿಯೇ ಯುಗಾದಿಗೆ ನಾವು ಹೊಸ ವರ್ಷ ಎಂದು ಆಚರಿಸುವುದು. 
ಹಾಗಾಗಿಯೇ ಈ ವರ್ಷದಲ್ಲಿ ಉತ್ತಮ ಮಳೆ,ಬೆಳೆ, ಹಾಗೂ ರೈತರಿಗೆ, ಕಾರ್ಮಿಕರಿಗೆ, ಪ್ರವಚನಗಾರರಿಗೆ,ವರ್ತಕರಿಗೆ,ಮಧ್ಯಮ ವರ್ಗದವರಿಗೆ ಶುಭವಾಗಲಿದೆ ಎಂದರು,
ಈ ಸಂದರ್ಭದಲ್ಲಿ, ಊರಿನ ಪ್ರಮುಖ ಮುಖಂಡರು, ರೈತರು ಇದ್ದರು.

Post a Comment

Previous Post Next Post