ವಿಜಯಪುರ ಇಬ್ಬರು ನಕಲಿ ಪತ್ರಕರ್ತರ ಬಂಧನ : ಪ್ರಕರಣ ದಾಖಲು


ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ವಿಜಯಪುರ,ಮಾರ್ಚ್ 27 : ಇಬ್ಬರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ರವಿವಾರ ನಡೆದಿದೆ. ವಿಶ್ವನಾಥ ಹಿರೇಮಠ ಹಾಗೂ ಶ್ರೀಶೈಲ್ ಹೊಸಮನಿ ಬಂಧಿತ ನಕಲಿ ಪತ್ರಕರ್ತರು. ಇನ್ನೂ ಆರೋಪಿಗಳು ಲಾರಿಗೆ ಅಡ್ಡಗಟ್ಟಿ ಲಾರಿಯಲ್ಲಿ ಅಕ್ರಮವಾಗಿ ಖಡಿ, ಮಣ್ಣು ಸಾಗಾಟ ಮಾಡುವ ಆರೋಪ ಬಂದಿದೆ. ನಾವು ಕ್ರೈಂ ವರದಿಗಾರರು ಎಂದು ಲಾರಿ ಚಾಲಕನಿಗೆ ಬ್ಲ್ಯಾಕ್ ಮೇಲ್ ಹಿನ್ನೆಲೆ ಸಂಜೀವ ದೂರಿನ ಮೇರೆಗೆ ಬಂಧನ ಮಾಡಲಾಗಿದೆ. ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

Previous Post Next Post