UDAYAVANI NEWS
ಬೆಂಗಳೂರು, ಮಾರ್ಚ್ 01 : ಹಿರಿಯ ರಂಗಕರ್ಮಿ, ಚಿತ್ರನಟ ಮೈಸೂರು ರಮಾನಂದ ಅವರ ಮಕ್ಕಳಾದ ಅಮಿತಾನಂದ ಹಾಗೂ ಹರ್ಷಿತಾನಂದ ಅವರು
ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ
ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರ ವೈದ್ಯಕೀಯ ವೆಚ್ಚಕ್ಕಾಗಿ ಕಲಾ ಬಂಧು
ಫೌಂಡೇಶನ್ ವತಿಯಿಂದ ಅಧ್ಯಕ್ಷ ನರಸಿಂಹರಾಜು.ಹೆಚ್ ಅವರು ಫೆ.
28 ರಂದು10 ಸಾವಿರ ರೂ. ನೆರವಿನ ಚೆಕ್ಕನ್ನು
ರಮಾನಂದ ಅವರಿಗೆ ನೀಡಿ ಮಕ್ಕಳು ಶೀಘ್ರ ಗುಣಮುಖ ಆಗಲೆಂದು ಹಾರೈಸಿದರು.
Tags
ರಾಜ್ಯ ಸುದ್ದಿಗಳು