UDAYAVANI NEWS
ಗುರುಗುಂಟಾ, ಮಾರ್ಚ್ 12 : ಸಮೀಪದ ರಾಯದುರ್ಗ ಗ್ರಾಮದಲ್ಲಿ ಶ್ರೀ ವೈರಾಗ್ಯ ವೀರ ಶ್ರೀ ಗುರು ಚನ್ನವೀರ ಶಿವಯೋಗಿ ರವರ 25 ನೇ ಪುಣ್ಯ ಸ್ಮರಣೆಯ ನಿಮಿತ್ತ ಜಾತ್ರಾ ಮಹೋತ್ಸವ ಜೊತೆಗೆ 6 ಸಾಮೂಹಿಕ ವಿವಾಹ ಜರುಗಿದವು.
ದಿವ್ಯ ಸಾನಿಧ್ಯವನ್ನು ಚನ್ನ ಬಸಯ್ಯ ಸ್ವಾಮಿ ಗದ್ದಗಿ ಮಠ ಸಾ// ಅರಹಳಹಳ್ಳಿ ಮಹೋತ್ಸವದ ಅಧ್ಯಕ್ಷತೆಯನ್ನು ರಾಜಾ ಸೋಮನಾಥ ನಾಯಕ ವಹಿಸುವ ಮೂಲಕ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಆದ 6 ನವ ಜೋಡಿಗಳಿಗೆ ಆಶೀರ್ವದಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ
ಮುಖಂಡರಾದ ವೆಂಕಟೇಶ್ ಗುತ್ತೇದಾರ, ಪರಮಣ್ಣ ಕುಂಬಾರ ಸಾಕಿನ್ ಕಕ್ಕೇರಾ, ಜನಾರ್ಧನ ಶೆಟ್ಟಿ, ಚಂದಪ್ಪ ಜೋಗಾರ,ಬಸಯ್ಯ ಸಾಹುಕಾರ, ಹನುಮಂತ ಮಂಗ್ಯಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಪೈದೊಡ್ಡಿ ಮತ್ತು ಉಪಾಧ್ಯಕ್ಷರು ಹಾಗೂ ಗುರುಗುಂಟಾ ಸಂಸ್ಥಾನ, ರಾಯದುರ್ಗ, ಟಣಮನಕಲ್, ಗದ್ಗಿ, ಕಕ್ಕೇರಾ, ಬೂಗಲ ಗಟ್ಟಿ ತುಪ್ಪ ದೂರು, ಹಾಲಾಪೂರ ಗ್ರಾಮಗಳ ಸಕಲ ಸದ್ಭಕ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು