ವರದಿ : ಮಲ್ಲಿಕಾರ್ಜುನ ಅಲ್ಲಾಪೂರ ಸಿಂದಗಿ
ಸಿಂದಗಿ, ಫೆಬ್ರುವರಿ 14 : ಸಂಜೆ ಬಂಗಾರ ಅಂಗಡಿ ಕಳ್ಳತನಕ್ಕೆ ಐವರು ಕಳ್ಳರು ಪ್ರಯತ್ನಿಸಿ ವಿಫಲರಾದ ಘಟನೆ ಸಿಂದಗಿ ನಗರದ ಶಾಂತೇಶ್ವರ ಮಠದ ಹತ್ತಿರ ಸರಾಫ ಬಜಾರನಲ್ಲಿ ನಡೆದಿದೆ.ನ್ಯೂ ಚಾಮುಂಡೇಶ್ವರಿ ಜುವೆಲರ್ಸ್ ಬಂಗಾರ ಅಂಗಡಿ ದೋಚಲು ಯತ್ನಿಸಿ ವಿಫಲರಾದಾಗ ಅಂಗಡಿ ಮಾಲೀಕನ ನಾಗರಾಜ ಪತ್ತಾರ ಮೇಲೆ ಫೈರಿಂಗ್ ಮಾಡಿದ್ದು ಅಂಗಡಿ ಮಾಲೀಕ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ನಂಬರ್ ಇಲ್ಲದ 150 ಸಿಸಿ ಯ ಪಲ್ಸರ್ ಬೈಕ್ ಮತ್ತು ಪಿಸ್ತೂಲ್ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮತ್ತು ಬೇರೆ ಸ್ಥಳದಲ್ಲಿ ಅವರಲ್ಲಿದ್ದ ಬ್ಯಾಗ್ ಅನ್ನು ಎಸೆದು ಪರಾರಿಯಾಗುವಾಗ ಹಜರತ್ ಗಾಜಿ ಹುಸೇನಿ ದರ್ಗಾ ಹತ್ತಿರ ಎರಡು ಆರೋಪಿಗಳನ್ನು ಸಾರ್ವಜನಿಕರು ಸೆರೆ ಹಿಡಿದು ಬ್ಯಾಗ್ ತಂದು ವಿಚಾರಿಸಿದಾಗ ಬ್ಯಾಗ್ ನಲ್ಲಿ ಮಚ್ಚು ಮಾಸ್ಕ್ಗಳನ್ನು ನೋಡಿ ಸಾರ್ವಜನಿಕರು ಬೆಚ್ಚಿಬಿದ್ದು ಪೊಲೀಸರಿಗೆ ಕರೆ ಮಾಡಿ ಒಪ್ಪಿಸಿರುವ ಘಟನೆ ನಡೆದಿದೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.