ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮಸ್ಕಿ ಪಟ್ಟಣಕ್ಕೆ ಧಿಡೀರ್ ಭೇಟಿ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಫೆಬ್ರುವರಿ 26 : ಲಿಂಗಸ್ಗೂರಿನ ಪಕ್ಷ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ ಸಿಂಧನೂರಿಗೆ ಹೋಗುವ ಮಾರ್ಗ ಮಧ್ಯೆ ಮಸ್ಕಿ ಪಟ್ಟಣಕ್ಕೆ ಧಿಡೀರ್ ಭೇಟಿ ನೀಡಿ ಬಸವೇಶ್ವರ ವೃತ್ತದ ಬಳಿ ಬಂದಿಳಿದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರನ್ನು ಪಟಾಕಿ ಸಿಡಿಸಿ ಸ್ವಾಗತಿಸಿದರು. 
ಮಸ್ಕಿ ಪಟ್ಟಣದ ಮುಖ್ಯ ರಸ್ತೆಯಲ್ಲಿನ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿದ ಕಟೀಲ್ ನಂತರ ಪ್ರತಾಪ್ ಗೌಡ ಪಾಟೀಲ್ ಮತ್ತು ಬಿಜೆಪಿ ಮಂಡಲ ಅಧ್ಯಕ್ಷರಾದ ಶಿವಪುತ್ರಪ್ಪ ಹರಳಹಳ್ಳಿ ರಾಜ್ಯಾಧ್ಯಕ್ಷರಿಗೆ ಸನ್ಮಾನ ಮಾಡಿ ಗೌರವಿಸಿದರು.
ಮಸ್ಕಿಯಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ಅಧಿಕಾರಕ್ಕೆ ತರಲು ಶ್ರಮ ವಹಿಸಬೇಕು ತಾವೆಲ್ಲ ಎಂದು ಸಲಹೆ ಸೂಚನೆಗಳನ್ನು ನೀಡಿದರು. 

ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್, ಮಲ್ಲಪ್ಪ ಅಂಕುಶದೊಡ್ಡಿ, ಅಂದಾನಪ್ಪ ಗುಂಡಳ್ಳಿ, ಡಾಕ್ಟರ್ ಬಿ.ಎಚ್ ದಿವಟರ,ದೊಡ್ಡಪ್ಪ ಕಡಬೂರು, ಬಸಪ್ಪ ಬ್ಯಾಳಿ ,ಡಾಕ್ಟರ್ ಪಂಚಾಕ್ಷರಯ್ಯ ಸ್ವಾಮಿ, ಬಿಜೆಪಿ ಯುವ ಮುಖಂಡರಾದ ಪ್ರಸನ್ನ ಪಾಟೀಲ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಶರಣಬಸವ ಸೊಪ್ಪಿಮಠ ಮಸ್ಕಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ನಾಗರಾಜ್ ಮಸ್ಕಿ, ಪುರಸಭೆ ಸದಸ್ಯರಾದ ಚೇತನ್ ಪಾಟೀಲ್, ಸುರೇಶ್ ಹರ ಸೂರು,ಮಲ್ಲಿಕಾರ್ಜುನ್ ಬ್ಯಾಳಿ, ಭರತ್ ಕುಮಾರ್, ಪಕ್ಷದ ಪದಾಧಿಕಾರಿಗಳಾದ ಗವಿಸಿದ್ದಪ್ಪ ಸಾಹುಕಾರ, ಶರಣಯ್ಯ ಗುಡದೂರು, ಬಸವರಾಜ್ ಬುಕ್ಕಣ್ಣ,ಅಭಿಜಿತ್ ಮಾಲಿ ಪಾಟೀಲ್, ಮೌನೇಶ್ ನಾಯಕ್, ಮಲ್ಲಿಕಾರ್ಜುನ ಬೈಲಗುಡ್ಡ, ನೂರಾರು ಬಿಜೆಪಿ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

Previous Post Next Post