UDAYAVANAI NEWS
ಬೆಂಗಳೂರು, ಫೆಬ್ರುವರಿ 07 : ಜಾಗತಿಕ ವಿವಿಗಳಲ್ಲಿ ಪದವಿ ಪಡೆಯಲು ಬಯಸುವವರಿಗಾಗಿ ನಗರದಲ್ಲಿ ಬೃಹತ್ ಮಟ್ಟದ “ಘೆಡೆಕ್ಸ್” ಎಕ್ಸ್ ಪೋ ಆಯೋಜಿಸಲಾಗಿದೆ.
ಎಂ.ಜಿ. ರಸ್ತೆಯ ತಾಜ್ ಹೋಟೆಲ್ ನಲ್ಲಿ ಇಂದಿನಿಂದ (ಫೆ 6ಮತ್ತು7) ಎರಡು ದಿನಗಳ ಜಾಗತಿಕ ವಿವಿಗಳ ಸಲಹೆಗಾರರು ಸಮಾವೇಶಗೊಂಡಿದ್ದು, ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
ಎಕ್ಸ್ ಪೋಗೆ ಚಾಲನೆ ನೀಡಿದ ಶಾಸಕ ಎನ್.ಎ. ಹ್ಯಾರೀಸ್, ಅಮೆರಿಕ, ಬ್ರಿಟನ್, ಭಾರತ, ಫ್ರಾನ್ಸ್ ಮತ್ತು ಇಟಲಿ ವಿಶ್ವವಿದ್ಯಾಲಯದ ಸಲಹೆಗಾರರು ಭಾಗವಹಿಸಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ಅಸೋಸಿಯೇಷನ್ ಆಫ್ ಇಂಡಿಯಾ ಸಂಘಟನೆಯ ಪ್ರಾಂಶುಪಾಲರು ಘೆಡೆಕ್ಸ್ ನ ಪಾಲುದಾರರಾಗಿದ್ದು, ಇದು ಯುನಿ ಇಟಲಿಯಾ ಅಧ್ಯಯನ ಕೇಂದ್ರದಿಂದ ಬೆಂಬಲಿತವಾಗಿದೆ. ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳು, ವಿವಿಧ ಕೋರ್ಸ್ ಗಳು ಮತ್ತು ಪಠ್ಯ ಕ್ರಮಗಳನ್ನು ತಿಳಿಯಲು ಇದು ಸದಾವಕಾಶವಾಗಿದೆ. ಫೈನ್ ಎಕ್ಸ್ ಪೀರಿಯನ್ಷಿಯಲ್ ಈವೆಂಟ್ ಪ್ರವೈಟ್ ಲಿಮಿಟೆಡ್ ಈ ಕಾರ್ಯಕ್ರಮ ಆಯೋಜಿಸಿದೆ.
ಹೆಚ್ಚಿನ ಮಾಹಿತಿಗೆ : www.ghedex.om/india / www.iieduex.com
Tags
ರಾಜ್ಯ ಸುದ್ದಿಗಳು