ಅಯ್ಯಪಲ್ಲಿ ಸರ್ಕಾರಿ ಶಾಲೆಗೆ ಉಚಿತ ಟಿವಿ ಕೊಡುಗೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೇತಮಂಗಲ, ಫೆಬ್ರುವರಿ 15 : ಸಮೀಪದ ಅಯ್ಯಪಲ್ಲಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಿಟಿಬಿ ಇಟ್ಟಿಗೆ ಕಾರ್ಖಾನೆಯ ಮಾಲೀಕರು ಆದಂತಹ ಶ್ರೀಧರ್ ಬಾಬು ಅವರು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉಚಿತವಾಗಿ ಸ್ಮಾರ್ಟ್ ಟಿವಿ ಯನ್ನು ನೀಡಿದ್ದಾರೆ.

ಬಿಟಿಬಿ ಬ್ರಿಕ್ಸ್ ನ ಸಿಇಒ ಪವನ್ ಸಾಯಿ ಅವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಬ್ಯಾಸ ಮಾಡುವ ವಿದ್ಯಾರ್ಥಿಗಳು ಕಡುಬಡತನ ದಿಂದ ಬಂದಿರುತ್ತಾರೆ ಅವರಿಗೆ ಶಿಕ್ಷಣವನ್ನು ನೀಡುವ ಸಂದರ್ಭದಲ್ಲಿ ಇನ್ನಷ್ಟು ಸಲಾಭವಾಗುತ್ತದೆ ಅಯ್ಯಪಲ್ಲಿ ಸರ್ಕಾರಿ ಶಾಲೆಗೆ 25 ಸಾವಿರ ರೂಪಾಯಿ ವೆಚ್ಚದ ಟಿ ವಿ ಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಅಯ್ಯಪಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಆದಂತಹ ಮಂಜುನಾಥ್ ಅವರು ನಮ್ಮ ಗ್ರಾಮದ ಶಾಲೆಗೆ ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಟಿವಿಯನ್ನು ನೀಡಿದ ಬಿಟಿಬಿ ಬ್ರಿಕ್ಸ್ ಮಾಲೀಕರಾದ ಶ್ರೀಧರ್ ಬಾಬು ಮತ್ತು ಸಿಇಓ ಪವನ್ ಸಾಯಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ತ್ರಿವೇಣಿ, ಯಶೋದ,ಗ್ರಾಮ ಪಂಚಾಯಿತಿ ಸದಸ್ಯರು ಮಂಜುನಾಥ್,ಯುವ ಮುಖಂಡರಾದ ದನ ವಿಜಯೇಂದ್ರ ರೆಡ್ಡಿ , ಪವನ್ ಸಾಯಿ, ಮುನಿಬ್, ಶ್ರೀಕಾಂತ್,ಆಟೋ ರವಿ ,ಗ್ರಾಮಸ್ಥರು ಇದ್ದರು.

Post a Comment

Previous Post Next Post