UDAYAVANI NEWS
ಮಸ್ಕಿ, ಫೆಬ್ರುವರಿ 20 : ತಾಲೂಕಿನ ಪಾಮನಕೆಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತುಪ್ಪದೂರು ಗ್ರಾಮದಲ್ಲಿ ಅದ್ದೂರಿಯಾಗಿ ಶ್ರೀಚನ್ನಯ್ಯತಾತ ಜಾತ್ರಾ ಮಹೋತ್ಸವ ಹಾಗೂ ಕುಂಭ ಮೆರವಣಿಗೆ ಅದ್ದೂರಿಯಾಗಿ ಜರುಗಿತು ಚನ್ನಯ್ಯ ತಾತ ದೇವಸ್ಥಾನದ 30ನೇ ವರ್ಷದ ಜಾತ್ರಾ ಮಹೋತ್ಸವ ಶನಿವಾರ ನಡೆಯಿತು. ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ನಾಳೆ ಭಾನುವಾರದಂದು ಸಾಮೂಹಿಕ ವಿವಾಹ ಹಾಗೂ ರಥೋತ್ಸವ ಜರುಗಲಿದೆ.
ನಂತರ ಗ್ರಾಮದ ಚನ್ನಯ್ಯ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಪುರವಂತರ ಸೇವೆ ಹಾಗೂ ಕುಂಭ, ಕಳಸ ಪಲ್ಲಕಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯಲ್ಲಿನ ಡೊಳ್ಳಿನ ತಂಡ, ವಿವಿಧ ಕಲಾ ತಂಡ ಹಾಗೂ ವಾದ್ಯಮೇಳಗಳು ಜನರನ್ನು ಆಕರ್ಷಿಸಿದವು. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಗುರು ಚನ್ನಯ್ಯತಾತ ದರ್ಶನ ಪಡೆದರು.
Tags
ಜಿಲ್ಲಾ ಸುದ್ದಿಗಳು