ತಾಲೂಕ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಫೆಬ್ರುವರಿ 23 : ಪಟ್ಟಣದ ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಮಸ್ಕಿ ತಾಲೂಕಿನ ಕರ್ನಾಟಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ 
ಗೌರವ ಅಧ್ಯಕ್ಷರನ್ನಾಗಿ ಗಂಗಾಧರ ಮೂರ್ತಿ ಪಿಡಿಓ, ಅಧ್ಯಕ್ಷರನ್ನಾಗಿ ಜ್ಯೋತಿ ಬಾಯಿ.ಟಿ ಪಿಡಿಓ, ಉಪಾಧ್ಯಕ್ಷರನ್ನಾಗಿ ಶರೀಫ್ ಸಾಬ್ ಪಿಡಿಓ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಉಮರ್ ಪಿಡಿಓ, ಖಜಾಂಜಿಯಾಗಿ ಸಂದೇಶ ಪಿಡಿಓ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ್ ಗುಡುದೂರು ಪಿಡಿಓ ಮಸ್ಕಿ ತಾಲೂಕಿನ ಕರ್ನಾಟಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಇದೇ ಸಂದರ್ಭದಲ್ಲಿ

ತಾಲೂಕ ಪಂಚಾಯತ ಅಧಿಕಾರಿಗಳು,
ಬಸವರಾಜ್ ವಟಗಲ್ ಪಿಡಿಒ, ಲಕ್ಷ್ಮಿಕಾಂತ್ ಗೌಡನ ಭಾವಿ ಪಿಡಿಒ,ಬಸವಲಿಂಗಪ್ಪ ಪಿಡಿಒ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Post a Comment

Previous Post Next Post