ರಸ್ತೆ ಅವ್ಯವಸ್ಥೆ ಸರಿಪಡಿಸುವಂತೆ ವಟಗಲ್ ಪಿಡಿಒ ರವರಲ್ಲಿ ಡಿ ವಿ ಪಿ ಮನವಿ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಫೆಬ್ರುವರಿ 25 : ತಾಲೂಕಿನ ವಟಗಲ್ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.


ಇರಕಲ್ ಗ್ರಾಮದಿಂದ ವಟಗಲ್ ಗ್ರಾಮಕ್ಕೆ ಹಾಗೂ ದೂರದ ಪಟ್ಟಣಕ್ಕೆ ತೆರಳುವ ಬಹುತೇಕ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಬಹಳ ತೊಂದರೆ ಉಂಟಾಗುತ್ತಿದ್ದು, ದ್ವಿ ಚಕ್ರ ವಾಹನ ಮತ್ತು ಬಸ್ ಸಂಚಾರ ಓಡಾಟಕ್ಕೆ ಸುಗಮ ರಸ್ತೆ ವ್ಯವಸ್ಥೆ ಮಾಡಬೇಕು ಎಂದು ವಟಗಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ರವರಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯೂ ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯ ಮಾಡಿದೆ.


ಇದೇ ಸಂದರ್ಭದಲ್ಲಿ

ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಸಂಘಟನೆಯ ಸಂಚಾಲಕರಾದ ಮೌನೇಶ್ ತುಗ್ಗಲದಿನ್ನಿ, ಹುಸೇನಿ ಇರಕಲ್ ಡಿ ವಿ ಪಿ ತಾಲೂಕ ಸಂಘಟನಾ ಕಾರ್ಯದರ್ಶಿ,
ವಿದ್ಯಾರ್ಥಿಗಳಾದ ಚನ್ನಬಸವ, ದೇವರಾಜ್, ಅಂಜಿನಪ್ಪ,ಮೌನೇಶ್, ಶಿವಗ್ಯಾನಿ, ಮಲ್ಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Post a Comment

Previous Post Next Post