ರಜನಿಕಾಂತ್ ಸೇವಾ ಸಮಿತಿ ವತಿಯಿಂದ ಸೇವಾ ಕಾರ್ಯಕ್ರಮ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಬೆಂಗಳೂರು, ಫೆಬ್ರುವರಿ 26 : ಸೂಪರ್ ಸ್ಟಾರ್ ರಜನಿಕಾಂತ್ ಅವರ 169 ನೇ ಜೈಲರ್ ಚಲನಚಿತ್ರದ ಯಶಸ್ವಿಯಾಗಿ ಬೇಗ ಬಿಡುಗಡೆಯಾಗಲಿ ಮತ್ತು ರಜನಿಕಾಂತ್ 42ನೇ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ಬೆಂಗಳೂರಿನಲ್ಲಿ ವಿಶೇಷ ಪೂಜೆ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ರಾಜ್ಯ ರಜನಿಕಾಂತ್ ಸೇವಾ ಸಮಿತಿ ಅಧ್ಯಕ್ಷ ರಜಿನಿ ಮುರುಗನ್ ತಿಳಿಸಿದರು.  
ನಗರದ ಗವಿಪುರಂನಲ್ಲಿರುವ ಶ್ರೀ ಗವಿ ಗಂಗಾದರೇಶ್ವರ ದೇವಸ್ಥಾನದಲ್ಲಿ ದೇವಾಲಯದಲ್ಲಿ ರಜಿನಿಕಾಂತ್ ಅವರ ಹೆಸರಿನಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. 
ರಜನಿಕಾಂತ್ ವಿದ್ಯಾಭ್ಯಾಸ ಮಾಡಿದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಾಟರ್ ಬಾಟಲ್, ಪೌರ ಕಾರ್ಮಿಕರಿಗೆ ಟಿಫಿನ್ ಕ್ಯಾರಿಯರ್‍ಗಳನ್ನು ವಿತರಿಸಲಾಯಿತು. ರಜನಿಕಾಂತ್ ಚಿತ್ರಗಳಿರುವ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಯೇಸು, ವಿಘ್ನೇಶ್, ಸಂತೋಷ್, ಅಶ್ವಿನ್, ಆಕಾಶ್, ವಿಮಲ್, ದಾದು, ಮದನ್, ಸುರೇದ್ರ, ಗಜೇಂದ್ರ ಮತ್ತಿತರರು ಭಾಗವಹಿಸಿದ್ದರು.

Post a Comment

Previous Post Next Post