UDAYAVANI NEWS
ಲಿಂಗಸ್ಗೂರು, ಫೆಬ್ರುವರಿ 03 : ತಾಲೂಕಿನ ಹಿರೇ ನಗನೂರು ಗ್ರಾಮಕ್ಕೆ ಸಹಾಯಕ ಆಯುಕ್ತರಾದ ಶ್ರೀ ಸಿಂಧೆ ಅವಿನಾಶ್ ಸಂಜೀವನ್ IAS ಇವರು ಅಚಾನಕ್ಕಾಗಿ ಭೇಟಿ ನೀಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇನಗನೂರು ಮಕ್ಕಳೊಂದಿಗೆ ಬಿಸಿ ಊಟವನ್ನು ಕಟ್ಟೆಯ ಮೇಲೆಯೇ ಸವಿಯುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ.
ಲಿಂಗಸುಗೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಶ್ರೀ ಸಿಂಧೆ ಅವಿನಾಶ್ ಸಂಜೀವನ್ IAS ಇವರು ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇನಗನೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಶಾಲಾ ಮಕ್ಕಳ ಜೊತೆ ಅದು ಕುರ್ಚಿ ಇಲ್ಲದೆ ಕಟ್ಟೆಯ ಮೇಲೆಯೇ ಚಿಕ್ಕ ಮಕ್ಕಳಂತೆ ಕುಳಿತು ಮಕ್ಕಳ ಮನಸ್ಸಿನ ಅಧಿಕಾರಿ ಮಧ್ಯಾಹ್ನದ ಬಿಸಿ ಊಟವನ್ನು ಮಾಡಿ ಸರಳತೆಯನ್ನು ಮೆರೆದು ಸಾರ್ವಜನಿಕ ವಲಯದಲ್ಲಿ ತುಂಬಾ ಮೆಚ್ಚುಗೆಯ ಚರ್ಚೆಗೆ ಗ್ರಾಸವಾಗಿದೆ. ಇಂತಹ ಸರಳ ವ್ಯಕ್ತಿತ್ವವ ಹೊಂದಿದ ಸಹಾಯಕ ಆಯುಕ್ತರನ್ನು ಪಡೆದ ನಾವೇ ಧನ್ಯರು ಎಂಬ ಅಭಿನಂದನೆಯ ಮಹಾಪೂರವೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Tags
ಜಿಲ್ಲಾ ಸುದ್ದಿಗಳು