ದ್ವಾರಕಾನಾಥ ವರದಿ ಜಾರಿಗೆಗೆ ನಬಿರಸೂಲ ಆಗ್ರಹ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಯಾದಗಿರಿ, ಫೆಬ್ರುವರಿ 21 : ಡಾ.ಸಿ ಎಸ್ ದ್ವಾರಕಾನಾಥ ಆಯೋಗದ ವರದಿ ಜಾರಿಗೆ ತರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕ ಪಿಂಜಾರ/ನದಾಫ/ಮನ್ಸೂರಿ ಸಂಘಗಳ ಮಹಾಮಂಡಳದ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ನಬಿರಸೂಲ ನದಾಫ ಏವೂರ ಆಗ್ರಹ ಪಡಿಸಿದ್ದಾರೆ.

ಸುಮಾರು ವರ್ಷಗಳಿಂದ ಪ್ರಾರಂಭವಾದ ನಮ್ಮ ಈ ಕೂಗು ಇಲ್ಲಿ ವರೆಗೂ ಯಾವುದೇ ಸರ್ಕಾರಕ್ಕೆ ಕೇಳಿಸಿಲ್ಲ ಬಜೇಟನಲ್ಲಿ ಪ್ರತ್ಯೇಕ ನಿಗಮ ಮಂಡಳಿ ಭರವಸೆ ನೀಡಿದ್ದರೂ ಘೋಷಿಸದಿರುವದು ನಮಗೆ ನೋವುಂಟು ಮಾಡಿದೆ.

ಪಿಂಜಾರ ಸಮುದಾಯವನ್ನು ಯಾಕೆ ಕಡೆಗಣಿಸುತ್ತಿದ್ದೀರೊ ಕೇವಲ ನಮ್ಮ ಸಮಾಜ ಓಟಿಗಾಗಿ ಬಳಸಿ ಕೊಳ್ಳುತ್ತಿದ್ದೀರಾ ನಮ್ಮ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದೆ ಪಿಂಜಾರ ನದಾಫ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆಯ ಆಶಾಭಾವನೆಯನ್ನು ಇಟ್ಟುಕೊಂಡಿದ್ದ ನಮಗೆ ಅನ್ಯಾಯವಾಗಿದೆ

ಚುನಾವಣೆಯ ಒಳಗಾಗಿ ಪಿಂಜಾರ ಅಭಿವೃದ್ದಿ ನಿಗಮಕ್ಕೆ ಆದೇಶ ನೀಡಬೇಕು ಇಲ್ಲಾಂದ್ರೆ ಮುಂದಿನ ಚುನಾವಣೆಯಲ್ಲಿ ಸಮುದಾಯ ದಿಂದ ತಕ್ಕ ಉತ್ತರ ನೀಡುತ್ತವೆ ಎಂದು ಜಿಲ್ಲಾ ಉಪಾಧ್ಯಕ್ಷ ನಬಿರಸೂಲ ಎಮ್ ನದಾಫ. ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.

Post a Comment

Previous Post Next Post