ದೆಹಲಿ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಮಸ್ಕಿ ತಂಡ ಹರ್ಷ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಫೆಬ್ರುವರಿ 28 : ರಾಷ್ಟ್ರ ರಾಜಧಾನಿ ನವೆಹಲಿಯಲ್ಲಿ ನಡೆದ ದೆಹಲಿ ಕರ್ನಾಟಕ ಸಂಘ 75ನೇ ಅಮೃತ ಮಹೋತ್ಸವ ಬಾರಿಸು ಕನ್ನಡ ಡಿಂಡಿಮವ ಈ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಮಸ್ಕಿ ತಂಡ ಭಾಗವಹಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಹೆಮ್ಮೆಯಾಗಿದೆ ಎಂದು ಕಲಾವಿದರ ತಂಡ ಹರ್ಷ ವ್ಯಕ್ತಪಡಿಸಿದೆ.

ದೆಹಲಿ ಕರ್ನಾಟಕ ಸಂಘ 75ನೇ ಅಮೃತ ಮಹೋತ್ಸವ ಬಾರಿಸು ಕನ್ನಡ ಡಿಂಡಿಮವ ಈ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಮಸ್ಕಿ ತಂಡ ಭಾಗವಹಿಸಿದ್ದೇ ಒಂದು ಹೆಮ್ಮೆಯ ವಿಷಯ ಎಂದು ತಮ್ಮ ಮನದಾಳದ ಹರ್ಷದ ಮಾತುಗಳನ್ನು ಪತ್ರಿಕೆಯ ಮೂಲಕ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಮಸ್ಕಿ ತಂಡ ಹೊರ ಹಾಕಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ವಿಜಯ ಕುಮಾರ್ ಸೊನಾರೇ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾರ ಎಸ್ ಅಂಗಡಿ,ಮಲ್ಲಪ್ಪ ಪೂಜಾರಿ, ತಿಮ್ಮಣ್ಣ ನಾಯಕ ಸಾಗರಕ್ಯಾಂಪ, ಬಸನಗೌಡ ಜಿನ್ನಾ ಪುರ, ಬಸಪ್ಪ ಗೌಡನಭಾವಿ,ಯಂಕಪ್ಪ ಮಡಿವಾಳ, ಹನುಮೇಶ ಗುಂಜಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Post a Comment

Previous Post Next Post