UDAYAVANI NEWS
ಬೇತಮಂಗಲ, ಫೆಬ್ರವರಿ 01 : ಸಮೀಪದ ಎನ್ ಜಿ ಹುಲ್ಕೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೀಡಮಾಕನಹಳ್ಳಿ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಗೌರಮ್ಮ ದೇವಸ್ಥಾನಕ್ಕೆ ಜನಪ್ರಿಯ ಮಾಜಿ ಶಾಸಕರು ವೈ ಸಂಪಂಗಿ ರವರು ಆರ್ಥಿಕ ಸಹಾಯ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ ಅಧಿಕಾರದಲ್ಲಿ ಇಲ್ಲದೆ ಇದ್ದರು ಸಹ ಪ್ರವಾಸಗಳಿಗೆ ಬಸ್ ವ್ಯವಸ್ಥೆ ಮಾಡುವುದು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಈ ರೀತಿಯಾಗಿ ನಿರಂತರ ಸಮಾಜಮುಖಿ ಕೆಲಸವನ್ನು ಮಾಡುತ್ತಿರುವ ವೈ.ಸಂಪಂಗಿ ಅವರಿಗೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಆಶೀರ್ವಾದ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್. ಜಿ. ಹುಲ್ಕೂರ್ ಗ್ರಾಮ ಪಂಚಾಯತಿ ಅಧ್ಯಕ್ಷರು ಸುನಿಲ್ ಕುಮಾರ್ ಗ್ರಾಮ ಪಂಚಾಯತಿ ಸದಸ್ಯರಾದ ಭವಾನಿ ಜಯಪಾಲ್ .ನಾರಾಯಣಸ್ವಾಮಿ. ಪ್ರಸಾದ್. ಪುರುಷೋತ್ತಮ.ಜೀಡಮಾಕನಹಳ್ಳಿ ಮಾಜಿ ಸದಸ್ಯರಾದ ಸುಧಾಕರ ರೆಡ್ಡಿ. ಆಂಜಪ್ಪ.ಮುಖಂಡರಾದ ಮಂಜುನಾಥ ಚಂದ್ರಪ್ಪ ಶ್ರೀರಾಮಪ್ಪ.ಸದಾಶಿವ. ವಿಜಿ ಕುಮಾರ್ ಗ್ರಾಮಸ್ಥರು ಭಾಗವಹಿಸಿದ್ದರು.
Tags
ಜಿಲ್ಲಾ ಸುದ್ದಿಗಳು