UDAYAVANI NEWS
ಯಾದಗಿರಿ, ಫೆಬ್ರುವರಿ 18 : ಎಸ್ ಡಿ ಕಟ್ಟಿಮನಿ ಮೂಲತಃ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಗನೂರು, ನಿವೃತ್ತ ಪ್ರಾಂಶುಪಾಲರು( ರಾಜಕೀಯಶಾಸ್ತ್ರ)
ಪ್ರಸ್ತುತ ಯಾದಗಿರಿ ಜಿಲ್ಲೆಯ ಪೊಲೀಸ್ ಪ್ರಾಧಿಕಾರದ ಸದಸ್ಯರು ಇದ್ದಾರೆ.
ಇವರು ಜನಪರ ಜೀವಪರ, ಕಾಳಜಿಯಿಂದ ಬದುಕನ್ನ ಸವಿಸುತ್ತಿರುವವರು, ಬುದ್ಧ ಬಸವ, ಅಂಬೇಡ್ಕರ್, ಮಾರ್ಕ್ಸ್, ಲೆನಿನ್,ಏಂಜಲ್ಸ್ ಇವರ ತತ್ವ ಆದರ್ಶಗಳನ್ನ ಮೈಗೂಡಿಸಿಕೊಂಡು ಬಂದವರು, ಎಲೆ ಮರೆಯ ಕಾಯಿಯಾಗಿಯೇ ಇವರು ಬದುಕನ್ನು ವಿದ್ಯಾರ್ಥಿಗಳ ಜೊತೆಯಲ್ಲಿಯೇ ಕಳೆಯುತ್ತಿದ್ದಾರೆ.ಕೋಲಿ ಸಮಾಜದ ಪ್ರಮುಖರಾದ ಪ್ರೊಫೆಸರ್ ಆಲ್ಗೂರು, ವಿಠ್ಠಲ್ ಹೇರೂರ್ ರವರ ಜೊತೆಯಲ್ಲಿ ಬೆಳೆದವರು.
ಇಂಥವರು ರಾಜಕೀಯ ಕ್ಷೇತ್ರಕ್ಕೆ ಬಂದರೆ ಸಾಮಾಜಿಕ ಬದಲಾವಣೆ ಸಾಧ್ಯ ಎನ್ನುವದು ಹತ್ತಾರು ಸಾವಿರ ವಿದ್ಯಾರ್ಥಿಗಳ ಅಭಿಪ್ರಾಯ, ಇದಕ್ಕಾಗಿಯೇ ರಾಷ್ಟ್ರಿಯ ಪಕ್ಷವೊಂದ ಇವರನ್ನು ಗುರುಮಿಟ್ಕಲ್ ವಿಧಾನಸಭಾ ಮತಕ್ಷೇತ್ರಕ್ಕೆ ಟಿಕೆಟ್ ಕೊಡುವ ಮೂಲಕ ರಾಜಕೀಯ ರಂಗವನ್ನು ಬಲಪಡಿಸುತ್ತಿದೆ.
( ನಮ್ಮ ಮಾದ್ಯಮಕ್ಕೆ ರಾಜಕೀಯ ಬಲ್ಲ ಮೂಲಗಳು ತಿಳಿಸಿವೆ)