ಹಿಪ್ಪರಗಿ ಎಸ್ ಎನ್ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ನವರ 903ನೇ ಜಯಂತಿ ಆಚರಣೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಜೇವರ್ಗಿ, ಫೆಬ್ರುವರಿ 27 : ತಾಲೂಕಿನ ಹಿಪ್ಪರಗಿ ಎಸ್ ಎನ್ ಗ್ರಾಮದಲ್ಲಿ ಶ್ರೀ ಗುರು ನಿಜಶರಣ ಅಂಬಿಗರ ಚೌಡಯ್ಯನವರ 903ನೇ ಜಯಂತೋತ್ಸವ ಕಾರ್ಯಕ್ರಮ ಹಾಗೂ ಶ್ರೀ ಗುರು ನಿಜಶರಣ ಅಂಬಿಗರ ಚೌಡಯ್ಯ ಶಿಕ್ಷಣ ಸಮಾಜ ಅಭಿವೃದ್ಧಿ ಸಂಸ್ಥೆ ಆಡಳಿತ ಮಂಡಳಿಯ ಕಾರ್ಯಾಲಯ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮ ನಿನ್ನೆ ಫೆಬ್ರವರಿ 26 ರಂದು ಜರುಗಿತು.
 ಮಹಾಂತೇಶ್ ಡಿ ಪಾಟೀಲ್ ಆಫ್ಜಲ್ಪುರ್ ಬ್ಲಾಕ್ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀಮತಿ ಶೋಭಾ ವಾಣಿ, ಬಿಜೆಪಿ ಮುಖಂಡರು ವಸಂತ ನರಿಬೋಳ,ಜ್ಯೋತಿ ಬೆಳಗಿಸಿದರು.
 ಶಿವಕುಮಾರ ನಾಟಿಕಾರ ಜೆಡಿಎಸ್ ಅಭ್ಯರ್ಥಿ ಅಫಜಲಪುರ, ಲಚ್ಚಪ್ಪ ಜಮಾದಾರ್ ಅಧ್ಯಕ್ಷರು ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿ, ಶಂಕರ ಕಟ್ಟಿಸಂಗಾವಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರು ಕಲಬುರ್ಗಿ,ಬಸವರಾಜಗೌಡ ಮಾಲಿ ಪಾಟೀಲ ಬಿಜೆಪಿ ಮುಖಂಡರು, ರೇವಣಸಿದ್ಧಪ್ಪಗೌಡ ಕಮಾನಮನಿ ತಾಲೂಕಾಧ್ಯಕ್ಷರು ಕೋಲಿ ಸಮಾಜ ಜೇವರ್ಗಿ, ಭೀಮರಾಯ ನಾಟಿಕಾರ ಜೆಡಿಎಸ್ ಮುಖಂಡರು,ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಮತ್ತು ಕಾರ್ಯಕ್ರಮಕ್ಕೆ ಗ್ರಾಮದ ಸಮಾಜದ ಹಿರಿಯರು ಮಹಿಳೆಯರು ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.
ಮಲ್ಕಣ್ಣ ಎಂ ಸರಡಗಿ ಸ್ವಾಗತಿಸಿದರು ಭೀಮಾಶಂಕರ ಬೆಣ್ಣುರ ಪ್ರಾಸ್ತವಿಕ ಮಾತನಾಡಿದರು ಗಂಗಾಧರ ಹಚ್ಚಡ ವಂದನಾರ್ಪಣೆ ಮಾಡಿದರು.

Post a Comment

Previous Post Next Post