UDAYAVANI NEWS
ಮಸ್ಕಿ, ಫೆಬ್ರುವರಿ 18 : ಸಾರ್ವಜನಿಕ ಹೋರಾಟ ಸಮಿತಿ ಮಸ್ಕಿ ವತಿಯಿಂದ ಪರಡಿ ನಂಬರ್ 17 ರ ಅತಿಕ್ರಮಣ ಜಾಗವನ್ನು ತೆರವುಗೊಳಿಸುವಂತೆ ಬೆಂಗಳೂರಿನ ವಿಧಾನ ಸೌಧ ದ ಮುಂಭಾಗ ರಾಜ್ಯದ ಕಂದಾಯ ಸಚಿವರಾದ ಆರ್. ಅಶೋಕ್ ರವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಲಾಯಿತು.
ಮಸ್ಕಿ ಪಟ್ಟಣವು ತಾಲೂಕು ಕೇಂದ್ರ ಸ್ಥಾನವಾಗಿದ್ದು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣವಾಗಿದೆ. ಮಸ್ಕಿಪಟ್ಟಣದ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ಕಾರಿ ಪರಿಡಿ ನಂಬರ್ 17 ಇದು ಸರಕಾರಿ ಜಮೀನು ಆಗಿದ್ದು ಈ ಜಮೀನನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿ ಬಾಡಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಾವುಗಳು ಈ ಮೊದಲು ಜಿಲ್ಲಾಧಿಕಾರಿಗಳು ರಾಯಚೂರು, ಸಹಾಯಕ ಆಯುಕ್ತರು ಲಿಂಗಸಗೂರು, ತಹಶೀಲ್ದಾರರು ಮಸ್ಕಿ, ಪ್ರಾಚ್ಯ ವಸ್ತು ಇಲಾಖೆ ಹೊಸಪೇಟೆ, ಮುಖ್ಯ ಅಧಿಕಾರಿಗಳು ಪುರಸಭೆ ಮಸ್ಕಿ ಇವರುಗಳಿಗೆ ಸಾಕಷ್ಟು ಸಲ ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅನಿವಾರ್ಯವಾಗಿ ಪ್ರಗತಿಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ರೈತ ಸಂಘಗಳು, ಚಿಂತಕರು, ರಾಜಕೀಯ ಮುಖಂಡರುಗಳು ಜೊತೆಗೂಡಿ ಸೋಮವಾರ ಒಂದು ದಿನದ ಸಂಕೇತಿಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ವನ್ನು ಸಲ್ಲಿಸಿದ್ದೇವೆ ಎಂದು ಸ್ಪಷ್ಟೀಕರಿಸಿ ನಂತರ ಕರ್ನಾಟಕ ಸರಕಾರದ ಕಂದಾಯ ಇಲಾಖೆ ಸಚಿವರಾದ ಆರ್. ಅಶೋಕ್ ರವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ
ನಾಯಕವಾಡಿ ಬಸವರಾಜ್, ಮಹಿಬೂಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ರಾಜ್ಯ ಸುದ್ದಿಗಳು