ಬಿ.ಇಡಿ ಪ್ರವೇಶದಿಂದ ಹೊರಗುಳಿಯುವ ಆತಂಕ, ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲವೇ : ಮೌನೇಶ ತುಗ್ಗಲದಿನ್ನಿ ಖಂಡನೆ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ,ಜನವರಿ 28 : ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯ ಫಲಿತಾಂಶದ ವಿಳಂಬ ನೀತಿಯಿಂದಾಗಿ ವಿವಿ ವ್ಯಾಪ್ತಿಯ ಬಿ.ಇಡಿ ಪ್ರವೇಶ ಪಡೆಯುವ ಹಂಬಲದಲ್ಲಿದ್ದ ವಿದ್ಯಾರ್ಥಿಗಳು ಪ್ರವೇಶಾತಿ ಪ್ರಕ್ರಿಯೆಯಿಂದಾಗಿ ಹೊರಗುಳಿಯುವಂತಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಸಂಚಾಲಕರಾದ ಮೌನೇಶ ತುಗ್ಗಲದಿನ್ನಿ ಗುಲಬರ್ಗಾ ವಿವಿ ಯ ವಿಳಂಬ ನಡೆಯನ್ನು ಖಂಡಿಸಿದ್ದಾರೆ.

ಜನವರಿ 18 ಹಾಗೂ 19ರಂದು ಬಿ.ಇಡಿ ಪ್ರವೇಶಾತಿಗೆ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ನಡೆದಿದ್ದು ಬಿ.ಇಡಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದರೂ ವಿಶ್ವವಿದ್ಯಾಲಯದ ಬೇಜವಾಬ್ದಾರಿ ನಡೆಯಿಂದಾಗಿ ಅಂಕಪಟ್ಟಿಗಳು ಇಲ್ಲದೆ ಪ್ರವೇಶ ಪಡೆಯಲು ಸಾಧ್ಯವಾಗದೆ ವಿದ್ಯಾರ್ಥಿಗಳು ಮುಂದೇನು ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ.
 ವಿಶ್ವವಿದ್ಯಾಲಯವು ಪದವಿ ಹಂತದ 3-4 ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟಿಸಿಲ್ಲ.
 2022 ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ನಡೆದ 6ನೇ ಸೆಮಿಸ್ಟರ್ ಫಲಿತಾಂಶವನ್ನು ಇನ್ನೂ ಪ್ರಕಟಿಸಿಲ್ಲ. ಕೆಲವು ಸೆಮಿಸ್ಟರ್ ಗಳ ಅಂಕ ಪಟ್ಟಿಗಳು ಕೊಟ್ಟಿಲ್ಲ ಹೀಗಾಗಿ ಬಿ.ಇಡಿ ಪ್ರವೇಶಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ದೂರಿದ್ದಾರೆ. ಕೇಂದ್ರೀಕೃತ ದಾಖಲಾತಿ ಘಟಕದ ನಿಯಮದಂತೆ ನವೆಂಬರ್ 30 ಒಳಗೆ ಪದವಿ ಪರೀಕ್ಷೆ ಮುಗಿದಿರಬೇಕು ಆದರೆ ಗುಲಬರ್ಗಾ ವಿಶ್ವವಿದ್ಯಾಲಯ ಜನವರಿ 13 ಕ್ಕೆ ಫಲಿತಾಂಶ ನೀಡಿರುವುದರಿಂದ ವಿದ್ಯಾರ್ಥಿಗಳು ಬಿ.ಇಡಿ ಪ್ರವೇಶದಲ್ಲಿ ವಂಚಿತರಾಗಿದ್ದಾರೆ.ಇದಲ್ಲದೆ ಇನ್ನೇನು ಕೆಲವೇ ದಿನಗಳಲ್ಲಿ 2500 ಪ್ರೌಢಶಾಲಾ ಶಿಕ್ಷಕರ ಸಂಘದ ಹುದ್ದೆಗೆ ಸರ್ಕಾರ ಅರ್ಜಿ ಕೂಡ ಕರೆಯಲಿದೆ, ಆದರೆ ವಾಸ್ತವದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಬಿ.ಇಡಿ 4ನೇ ಸೆಮಿಸ್ಟರ್ ಪತ್ರಿಕೆಗಳ ಮೌಲ್ಯಮಾಪನ ಕೂಡ ಆಗಿರುವುದಿಲ್ಲ ಎಂದು ತಿಳಿದುಬಂದಿದೆ.
ಕೇಂದ್ರೀಕೃತ ದಾಖಲಾತಿ ಘಟಕದ ನಿಯಮದ ಅನುಸಾರವಾಗಿ ಈ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲು ಆಗುವುದಿಲ್ಲ ಆದರೆ ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು 
ಬಿ. ಇಡಿ ಪ್ರವೇಶದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವಲ್ಲಿ ನೆರವಾಗಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಇಡೀ ರಾಜ್ಯಾದ್ಯಂತ ಗುಲಬರ್ಗಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವುದರ ಮುಖಾಂತರ ಎಚ್ಚರಿಕೆಯನ್ನು ರವಾನಿಸುತ್ತಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ನಮ್ಮ ಸಮಿತಿಯು ಎಚ್ಚರಿಸುತ್ತದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಮಸ್ಕಿ ತಾಲೂಕ ಸಂಚಾಲಕರಾದ ಮೌನೇಶ ತುಗ್ಗಲದಿನ್ನಿ ವಿವಿಯ ವಿಳಂಬ ನೀತಿಯನ್ನು ಖಂಡಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post