ವಿದ್ಯುತ್ ಕಂಬ ಸ್ಥಳಾಂತರಿಸಲು ಮನವಿ, ಜೆಸ್ಕಾಂ ಇಲಾಖೆಯ ವಿಳಂಬ : ಆರೋಪ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 20 : ಪಟ್ಟಣದ 15 ನೇ ವಾರ್ಡಿನ ಬಸವರಾಜ ನಾಯಕ ಎಂಬುವವರ ಮನೆಯ ಪಕ್ಕದ ವಿದ್ಯುತ್ ಕಂಬದಲ್ಲಿ ಅವೈಜ್ಞಾನಿಕವಾಗಿ ವೈಯರ್ ಗಳು ತೂಗಾಡುತ್ತಿದ್ದು ಹಾಗೇಯೇ ಮಳೆ ಬಂದ್ರೆ ಇಡೀ ಮನೆ ಸುತ್ತ ಮುತ್ತ ವಿದ್ಯುತ್ ಸ್ಪರ್ಶವಾಗುತ್ತದೆ. ವಿದ್ಯುತ್ ಕಂಬ ಸ್ಥಳಾಂತರಿಸಿ ಹಾಗೂ ವೈಯರ್ ಸಮಸ್ಯೆ ಸರಿಪಡಿಸಲು ಜೆಸ್ಕಾಂ ಇಲಾಖೆಯ ಗಮನಕ್ಕೂ ತಂದರೂ ವಿಳಂಬ ಮಾಡುತ್ತಿದ್ದಾರೆ ಎಂದು ಬಸವರಾಜ್ ನಾಯಕ ಪತ್ರಿಕೆಗೆ ತಿಳಿಸಿದ್ದಾರೆ.
15 ನೇ ವಾರ್ಡಿನ ಬಸವರಾಜ ನಾಯಕ ಎಂಬುವವರ ಮನೆಯ ಪಕ್ಕದ ಸಾರ್ವಜನಿಕರು ವಿದ್ಯುತ್ ಸಂಪರ್ಕ ಪಡೆದಿದ್ದು, ವಿದ್ಯುತ್ ಕಂಬದಲ್ಲಿ ಅವೈಜ್ಞಾನಿಕವಾಗಿ ವೈಯರ್ ಗಳು ತೂಗಾಡುತ್ತಿದ್ದು, ಮುಖ್ಯ ಲೈನ್ ತಂತಿಯು ಕೂಡಾ ಜೋರಾಗಿ ಗಾಳಿ ಬೀಸುವ ಸಂದರ್ಭದಲ್ಲಿ ಮೇಲೆ ಮತ್ತು ಕೆಳಗೆ ಉಯ್ಯಾಲೆ ರೀತಿಯಲ್ಲಿ ಅಲುಗಾಡುತ್ತಿದ್ದು ಯಾವುದೇ ಸಂದರ್ಭದಲ್ಲಿಯೂ ಅನಾಹುತ ಸಂಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಕಂಬವು ಕೂಡಾ ಶಿಥಿಲಾವಸ್ಥೆಯಲ್ಲಿದೆ. ಹಾಗೇಯೇ ಮಳೆ ಬಂದ್ರೆ ಇಡೀ ಮನೆ ಸುತ್ತಮುತ್ತ ವಿದ್ಯುತ್ ಸ್ಪರ್ಶವಾಗುತ್ತದೆ. ವಿದ್ಯುತ್ ಕಂಬ ಸ್ಥಳಾಂತರಿಸಿ ಹಾಗೂ ವೈಯರ್ ಸಮಸ್ಯೆ ಸರಿಪಡಿಸಲು ಜೆಸ್ಕಾಂ ಇಲಾಖೆಯ ಗಮನಕ್ಕೂ ಹತ್ತಾರು ಬಾರಿ ಅರ್ಜಿ ಸಲ್ಲಿಸಿದರು ಕ್ಯಾರೇ ಎನ್ನದ ಅಧಿಕಾರಿಗಳು. ಮುಂಬರುವ ದಿನಗಳಲ್ಲಿ 15 ನೇ ವಾರ್ಡಿನ ಅಥವಾ ಇನ್ನಿತರೇ ಯಾವುದೇ ವ್ಯಕ್ತಿಗೆ ತೊಂದರೆಯಾಗಿದ್ದೆ ಆದರೆ ಅದಕ್ಕೆ ಜೆಸ್ಕಾಂ ಇಲಾಖೆ ನೇರ ಹೊಣೆಯಾಗುತ್ತದೆ ಎಂದು ಬಸವರಾಜ್ ನಾಯಕ ಪತ್ರಿಕೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Post a Comment

Previous Post Next Post