UDAYAVANI NEWS
ಮಸ್ಕಿ, ಜನವರಿ 03 : ಅಮರಶಿಲ್ಪಿ ಜಕಣಾಚಾರಿ ಅವರು ಶಿಲ್ಪಕಲೆಗೆ ಅಪಾರವಾದ ಕೊಡುಗೆ ನೀಡಿದ್ದು, ಸೂರ್ಯ ಚಂದ್ರ ಇರುವವರೆಗೂ ಇವರ ಹೆಸರು ಅಮರವಾಗಿರುತ್ತದೆ ಎಂದು ಸಮಾಜದ ಮುಖಂಡರಾದ ಬಸವರಾಜ ಸಾಲವಡಗಿ ಹೇಳಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ
ಹಮ್ಮಿಕೊಂಡಿದ್ದ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಬಳಗಾನೂರು ವಿಶ್ವಕರ್ಮ ಸಮಾಜದ ಬಾಂಧವರು ಭಾಗವಹಿಸಿ ಅಮರಶಿಲ್ಪಿ ಜಕಣಾಚಾರ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಮಾತನಾಡಿದ ಶಿವಪುತ್ರ ಕಲ್ಮನಿ ಜಕಣಾಚಾರಿ ಅವರು ತಮ್ಮ ಇಡೀ ಜೀವವನ್ನು ಶಿಲ್ಪ ಕಲೆಗೆ ಮುಡಪಾಗಿಟ್ಟುದ್ದರು. ಅತ್ಯಂತ ಸುಂದರವಾದ ಹಾಗೂ ಮನಮೋಕವಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾಗಿದ್ದಾರೆ. ಇವರು ನಿರ್ಮಿಸಿರುವ ಹಲವಾರು ಶಿಲ್ಪ ಕಲೆಗಳು ವಿಶ್ವಪ್ರಸಿದ್ದಿಯಾಗಿವೆ. ಶಿಲ್ಪ ಕಲೆಗೆ ಜಕಣಾಚಾರಿ ಅವರು ನೀಡಿರುವ ಕೊಡುಗೆ ಅಪಾರವಾಗಿದೆ. ಅವರ ಸೇವೆ ಅನುಕರಣೀಯ ಎಂದು ಬಣ್ಣಿಸಿದರು.
ಪ್ರಭು ಪತ್ತಾರ ಮಾತನಾಡಿ ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಸೇವೆಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತೇವೆ. ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರಬೇಕು. ವಿಶ್ವ ಕರ್ಮಸಮುದಾಯವು ಪಂಚ ಕಸುಬುಗಳನ್ನು ಅವಲಂಬಿಸಿದ್ದು,ಇವುಗಳನ್ನು ಜೀವಂತವಾಗಿ ಉಳಿಸಿಕೊಂಡು
ಹೋಗಬೇಕು ಎಂದರು.
ಈ ವೇಳೆ ಮಾನಯ್ಯ ಕಲ್ಮನಿ,ಅಮರೇಶ ಕಮ್ಮಾರ, ಪ್ರಭು ಪತ್ತಾರ, ಶ್ರೀಧರ, ಚಂದ್ರಶೇಖರ, ಶಿವಪುತ್ರ ಕಲ್ಮನಿ, ಬಸವರಾಜ ಸಾಲಾವಡಗಿ, ಶರಣಪ್ಪ ವೀರೇಶ್ ಬೋತಲದಿನ್ನಿ, ಮೌನೇಶ ಬೆಳ್ಳಿಗೂರು ಹಾಗೂ ಪಟ್ಟಣದ ವಿಶ್ವಕರ್ಮ ಸಮಾಜದ ಮುಖಂಡರು
ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು