UDAYAVANI NEWS
ಸಿಂಧನೂರು, ಜನವರಿ 13 : ತಾಲೂಕಿನ ಕನ್ನಾರಿ ಗ್ರಾಮದ ಸ.ಕಿ.ಪ್ರಾ.ಶಾಲೆಯ ಆವರಣದಲ್ಲಿ ಇಂದು ಗುರುವಾರ ವನಸಿರಿ ಫೌಂಡೇಶನ್ ಸಿಂಧನೂರು,ಸ.ಕಿ.ಪ್ರಾ.ಶಾಲೆ ಕನ್ನಾರಿ ಹಾಗೂ ಆರೋಗ್ಯ ಧಾಮ ಕನ್ನಾರಿ ನೇತೃತ್ವದಲ್ಲಿ"ಸ್ವಾಮಿ ವಿವೇಕಾನಂದರ ಜಯಂತೋತ್ಸವ"(ರಾಷ್ಟ್ರೀಯ ಯುವ ದಿನ) ಹಾಗೂ "ಅವಧೂತ ಪರಂಪರೆಯ ಶರಣ ಶ್ರೀ ಸಿದ್ದಪ್ಪ ತಾತನವರ ನೆನೆಯುವ ಕಾರ್ಯಕ್ರಮ"ದ ನಿಮಿತ್ತವಾಗಿ ಸಸಿ ನೆಡುವ ಕಾರ್ಯಕ್ರಮ ಮತ್ತು ಮಕ್ಕಳಿಗೆ ಪರಿಸರ ಜಾಗೃತಿ ಕಾರ್ಯಗಾರ ಅದ್ದೂರಿಯಾಗಿ ನೆರವೇರಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಊರಿನ ಹಿರಿಯರಾದ ಶರಣೇಗೌಡ ಗೊರೆಬಾಳ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಅಮರೇಗೌಡ ಮಲ್ಲಾಪೂರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು,ಸಿದ್ದಪ್ಪ ಮುಖ್ಯೋಪಾಧ್ಯಾಯರು, ಯಂಕೋಬ SDMCಅಧ್ಯಕ್ಷರು, ಕಾಂತರಾಜ ಶಿಕ್ಷಕರು,ಅಮರೇಶ ಮಡಿವಾಳ,ಈರಣ್ಣ ಕುರಿ, ಕರಿಲಿಂಗಪ್ಪ,ಮೌನೇಶ ನಾಯಕ, ಸಿದ್ರಾಮೇಶ್ವರ SBI,ಶಾರದಮ್ಮ ಹಾಗೂ ಶಾಲೆಯ ಮುದ್ದು ಮಕ್ಕಳು ಭಾಗಿಯಾಗಿದ್ದರು.
Tags
ಜಿಲ್ಲಾ ಸುದ್ದಿಗಳು