UDAYAVANI NEWS
ಯಾದಗಿರಿ,ಜನವರಿ 31 : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು, ಯಾದಗಿರಿ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಸಭೆಯಲ್ಲಿ ಭಾಗವಹಿಸ ಮಾತನಾಡಿ ಇದೇ ಫೇ- 25 ಕ್ಕೆ ಮೊದಲ ರಾಜ್ಯ ಸಮ್ಮೇಳನ ನಡೆಯುತ್ತಿದ್ದು ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಅವರು, ರಾಜ್ಯದಲ್ಲಿರುವ 16,000 ಪತ್ರಕರ್ತರಿಗೆ ಸರ್ಕಾರಿ ಸೌಲಭ್ಯ ಹಾಗೂ ಮಾಶಾಸನ ಸೇರಿದಂತೆ ನೊಂದ ಪತ್ರಕರ್ತರ ಹಲವು ಬೇಡಿಕೆಗಳು ಈಡೇರಿಕೆಗಾಗಿ ನಿರಂತರವಾಗಿ ಶ್ರಮಿಸುವ ಮೂಲಕ ಕಾನೂನಾತ್ಮಕವಾಗಿ ನ್ಯಾಯ ಒದಗಿಸಲು ನಿರಂತರವಾಗಿ ಹೋರಾಡುತ್ತೇನೆ. ಹಾಗೂ ಇದೇ ಮುಂಬರುವ ಫೇಬ್ರುವರಿ- 25 ನೇ ತಾರೀಖಿನಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಮೊದಲ ರಾಜ್ಯ ಸಮ್ಮೇಳನ ನಡೆಯುತ್ತಿದ್ದು ಈ ರಾಜ್ಯ ಸಮ್ಮಳನದಲ್ಲಿ ಎಲ್ಲಾ ಜಿಲ್ಲೆ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆ ಜಿಲ್ಲಾಧ್ಯಕ್ಷರನ್ನಾಗಿ ಅಯ್ಯಣ್ಣ ಹೂಗಾರ ಅವರನ್ನು ಆಯ್ಕೆ ಮಾಡಿದರು. ಶಹಾಪುರ ತಾಲ್ಲೂಕು ಅಧ್ಯಕ್ಷರಾಗಿ ಮಡಿವಾಳಪ್ಪ ಪಾಟೀಲ್, ಹುಣಸಗಿ ತಾಲೂಕು ಅಧ್ಯಕ್ಷರಾಗಿ ಬಾಪುಗೌಡ ಮೇಟಿ, ಸುರಪುರ ತಾಲೂಕು ಅಧ್ಯಕ್ಷರಾಗಿ ಮೌನೇಶ ಬಿ. ಮಂಗಿಹಾಳ ಅವರಿಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಇಶಾಕ್, ಸೇರಿದಂತೆ ಯಾದಗಿರಿ, ಶಹಾಪುರ, ಸುರಪುರ ಹುಣಸಗಿ ತಾಲೂಕಿನ ಪದಾಧಿಕಾರಿಗಳು ಇದ್ದರು.
Tags
ಜಿಲ್ಲಾ ಸುದ್ದಿಗಳು