ಅಮರ ಪ್ರೇಮ ಚರ್ಚ್ ಕಾನ್ವೆಂಟ್ ನಲ್ಲಿ ಸ್ವಚ್ಛತಾ ಕಾರ್ಯ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಡಿಸೆಂಬರ್19 : ಅಭಿನಂದನ್ ಸಂಸ್ಥೆಯ ವಿನೂತನ ಸ್ವಚ್ಚತಾ ಅಭಿಯಾನವಾದ ಸಂಡೆ ಫಾರ್ ಸೋಶಿಯಲ್ ವರ್ಕ್ ನ 76ನೇ ಸೇವಾ ಕಾರ್ಯವನ್ನು ಕ್ರಿಸ್ ಮಸ್ ಪ್ರಯುಕ್ತ ಮಸ್ಕಿ ನಗರದ ಸೇಂಟ್ ಜಾನ್ಸ್ ಚರ್ಚ್ ನ ಅಮರ ಪ್ರೇಮ ಕಾನ್ವೆಂಟ್ ನ ಆವರಣದಲ್ಲಿ ಬೆಳೆದಿದ್ದ ಜಾಲಿ ಗಿಡಗಳನ್ನು ತೆಗೆದು ಕಾಂಪೌಂಡ್ ಗೋಡೆಗೆ ಬಣ್ಣವನ್ನು ಹಚ್ಚಿ ಸುಂದರಗೊಳಿಸಲು. ಈ ಸಂದರ್ಭದಲ್ಲಿ ಮಾತನಾಡಿದ ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ಅವರು ಸ್ವಚ್ಛ ಭಾರತವನ್ನು ನಿರ್ಮಾಣ ಮಾಡುವಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಿದೆ. ಹಾಗೂ ಸ್ವಚ್ಚತೆಗೆ ಎಂದಿಗೂ ಧರ್ಮದ ಪರಿಮಿತಿ ಕಂಡುಬರುವುದಿಲ್ಲ. ಆದ್ದರಿಂದ ಮುಂದಿನ ವಾರದಲ್ಲಿ ಇರುವ ಕ್ರಿಸ್ ಮಸ್ ಆಚರಣೆಗಾಗಿ ಉತ್ತಮವಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಇಂದು ಈ ಸ್ಥಳವನ್ನು ಆಯ್ಕೆ ಮಾಡಲಾಯಿತು ಎಂದರು. 

ಈ ಸೇವಾ ಕಾರ್ಯದಲ್ಲಿ ಅಮರ ಪ್ರೇಮ ಕಾನ್ವೆಂಟ್ ನ ಮೇಲ್ವಿಚಾರಕರಾದ ಸಿಸ್ಟರ್ ವಂದನಾ, ಸಿಸ್ಟರ್ ದೀಪ, ಅಭಿನಂದನ್ ಸಂಸ್ಥೆಯ ಪದಾಧಿಕಾರಿಗಳಾದ ಜಾಫರಮಿಯ, ಮಲ್ಲಿಕಾರ್ಜುನ ಬಡಿಗೇರ, ರವಿಚಂದ್ರ, ಬಸಲಿಂಗಪ್ಪ ಬಾದರ್ಲಿ, ಕಿಶೋರ್, ಅಭಿನಂದನ್ ಸ್ಪೂರ್ತಿ ಧಾಮದ ಮಕ್ಕಳು ಮತ್ತು ಅಮರ ಪ್ರೇಮ ಕಾನ್ವೆಂಟ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Post a Comment

Previous Post Next Post