ವಿವಿಧ ಕಾಮಗಾರಿಗಳಿಗೆ ಮಸ್ಕಿ ಶಾಸಕರು ಭೂಮಿ ಪೂಜೆ ನೆರವೇರಿಸಿದರು


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಡಿಸೆಂಬರ್ 16 : ಕ್ಷೇತ್ರದ ಸಿಂಧನೂರು ಟು ತಾವರಗೆರೆ ಮುಖ್ಯ ರಸ್ತೆ ಹಾಗೂ ತುರುವಿಹಾಳ ಪಟ್ಟಣದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕಟ್ಟಡಕ್ಕೆ ಪಕ್ಷದ ಬೆಂಬಲಿಗರೊಂದಿಗೆ ಶಾಸಕ ಆರ್. ಬಸನಗೌಡ ತುರುವಿಹಾಳ ಭೂಮಿ ಪೂಜೆ ನೆವೇರಿಸಿದರು.
ಗುರುವಾರ ಸಿಂಧನೂರು ಟು ತಾವರಗೆರೆ ಮುಖ್ಯ ರಸ್ತೆಯಿಂದ ವಿರೂಪಾಪುರ ಗ್ರಾಮದವರೆಗೆ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ತುರುವಿಹಾಳ ಪಟ್ಟಣದಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕಟ್ಟಡಕ್ಕೆ ಪಕ್ಷದ ಬೆಂಬಲಿಗರೊಂದಿಗೆ ಮಸ್ಕಿ ಕ್ಷೇತ್ರದ ಜನಪ್ರಿಯ ಶಾಸಕರಾದ ಆರ್.ಬಸನಗೌಡ ತುರುವಿಹಾಳ ಭೂಮಿ ಪೂಜೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ವೆಂಕಟೇಶ್ವರಾವ್, ರೈತ ಮುಖಂಡ ರವಿ ಮಲ್ಲದಗುಡ್ಡ,ಶ್ರೀ ಚಂದ್ರೆಗೌಡ ವಕೀಲರು, ಮಲ್ಲನಗೌಡ ದೇವರ ಮನಿ, ಫಾರುಕ್ ಸಾಬ್ , ಶೇಖರಗೌಡ ದೇವರಮನಿ, ಅಬ್ಬುಸಾಬ್, ಸಿರಾಜ್ ಪಾಷ,ಕರಿಯಪ್ಪ ಪಟ್ಟಣ ಪಂಚಾಯತಿ ಸದಸ್ಯರು, ವೀರಭದ್ರಗೌಡ, ಮಂಟೆಪ್ಪಾ ಸಾವುಕಾರ್, ಮತ್ತು ಪಟ್ಟಣ ಪಂಚಾಯತಿ ಸದಸ್ಯರು,ಊರಿನ ಮುಖಂಡರು ಭಾಗಿಯಾಗಿದ್ದರು.



Post a Comment

Previous Post Next Post