UDAYAVANI NEWS
ಮಸ್ಕಿ, ಡಿಸೆಂಬರ್ 25 : ತಾಲೂಕಿನ ಗೋನಾಳ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಸಭೆ ಕರೆದು ನೂತನ ಎಸ್ ಡಿ ಎಮ್ ಸಿ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಶನಿವಾರ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೋನಾಳ ಶಾಲೆಯ ನೂತನ ಎಸ್‌ಡಿಎಂಸಿ ಅಧ್ಯಕ್ಷರಾಗಿ ವಿನೋದ್ ಕುಮಾರ್ ತಂದೆ ಹನುಮಂತಪ್ಪ, ಉಪಾಧ್ಯಕ್ಷರಾಗಿ ಸರಸ್ವತಿ ಗಂಡ ಮೌನೇಶ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ನೂತನ ಸದಸ್ಯರುಗಳಾದ ಹಿರೇ ಲಿಂಗಪ್ಪ ದಳಪತಿ, ದಯಾನಂದ, ಹುಸೇನ್ ಬಾಷಾ, ಮಲ್ಕನ ಗೌಡ, ಖಾನಪ್ಪ, ದೇವಪ್ಪ, ಹುಚ್ಚಪ್ಪ, ಶರಣಗೌಡ, ರೇಣುಕಮ್ಮ ಗಂಡ ಪರಶುರಾಮ, ರವತ್ ಜಾನ್ ಬೀ ಗಂಡ ರಂಜಾನ್ ಸಾಬ್, ದ್ಯಾಮಮ್ಮ ಗಂಡ ಹುಸೇನಪ್ಪ, ಸುಮಿತ್ರ ಗಂಡ ಜಯರಾಜ್, ರಾಜಮ್ಮ ಗಂಡ ಮಂಜಪ್ಪ, ಲಕ್ಷ್ಮಿ ಗಂಡ ನಾಗಪ್ಪ, ಶಾಂತ ಗಂಡ ರಾಮಣ್ಣ ರವರನ್ನು ಶಾಲೆಯ ಮುಖ್ಯ ಗುರುಗಳ ನೇತ್ರತ್ವದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.
ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ
ಚೆನ್ನನ ಗೌಡ ಮಾಲಿ ಪಾಟೀಲ್, ಮಹೇಶ್ ಕುಮಾರ್ ದೇಶಮುಖ್, ಮಲ್ಲಪ್ಪ ಎಸ್ ಗೋನಾಳ್, ಮಲ್ಲಯ್ಯ ಪಟ್ಟದೊಡೆಯರ್, ಅನ್ವರ್ ಪಾಷಾ, ಸುರೇಶ್ ಗೌಡ, ಶರಣಬಸವ ಸಾಹುಕಾರ್, ಶಾಂತಪ್ಪ, ಮರಿಸ್ವಾಮಿ ಗ್ರಾಮ ಪಂಚಾಯತ್ ಸದಸ್ಯರು, ಮಲ್ಲಿಕಾರ್ಜುನ ಗ್ರಾಮ ಪಂಚಾಯತ್ ಸದಸ್ಯರು, ನಾಗರಾಜ್ ದಿನ್ನಿ, ಆರಕ್ಷಕರಾದ ಹನುಮಂತ ಜಮದಾರ್ ಬಳಗಾನೂರ ಶ್ರೀ ಸಾಯಿಬಾಬಾ ಹಾಗೂ ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಹಾಜರಿದ್ದರು.
Tags
ಜಿಲ್ಲಾ ಸುದ್ದಿಗಳು