ಹಲ್ಲೆ ಖಂಡಿಸಿ ಚಿತ್ತಾಪುರ ಕೋಲಿ ಮತ್ತು ತಳವಾರ ಸಮಾಜದ ವತಿಯಿಂದ ತಹಶೀಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಕೆ

ಸುದ್ದಿ ಸಂಪಾದಕರು: ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಚಿತ್ತಾಪುರ, ಡಿಸೆಂಬರ್ 04 : ಯಾದಗಿರಿ ಜಿಲ್ಲೆಯ ಹುಣಸಗಿ ತಹಶೀಲ್ದಾರ್ ಕಚೇರಿ ಹತ್ತಿರ ಬುಡಕಟ್ಟು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಪತ್ರಕರ್ತರು ಆದ  ಅಮರೇಶ ಕಾಮನಕೇರಿ ಅವರ ಮೇಲೆ ದೈಹಿಕ ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಚಿತ್ತಾಪುರ ಕೋಲಿ ಮತ್ತು ತಳವಾರ ಸಮಾಜದ ವತಿಯಿಂದ ತಹಶೀಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಕೆ 

ದಿನಾಂಕ 2.11.2022 ರಂದು ಯಾದಗಿರಿ ಜಿಲ್ಲೆಯ ಹುಣಸಗಿ ತಹಶೀಲ್ದಾರ್ ಕಚೇರಿಗೆ ತೆರಳಿದ ಬುಡಕಟ್ಟು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಅಮರೇಶ ಕಾಮನಕೇರಿ ಅವರ ಮೇಲೆ ಸುಮಾರು 20 ಜನರ ಪುಂಡರ ಗುಂಪು ಏಕಾಏಕಿ ದಾಳಿ ಮಾಡಿ ದೈಹಿಕ ಹಲ್ಲೆ ನಡೆಸಿದೆ. ಗುಂಪುಗೂಡಿ ದೈಹಿಕ ಹಲ್ಲೆ ಮಾಡಿರುವುದನ್ನು ಚಿತ್ತಾಪುರ ತಾಲ್ಲೂಕು ಕೋಲಿ ಸಮಾಜವು ಖಂಡಿಸುತ್ತದೆ. ಹಲ್ಲೆ ಮಾಡಿರುವ ಘಟನೆ ಗಮನಿಸಿದರೆ ಕಾಮನಕೇರಿ ಅವರನ್ನು ಕೊಲೆ ಮಾಡುವ ಸಂಚು ನಡೆಸಿದಂತೆ ಭಾಸವಾಗುತ್ತಿದೆ. ತಳವಾರ ಜಾತಿ ಜನರಿಗೆ ಕಾನೂನು ಪ್ರಕಾರ ನಿಯಮಬದ್ಧವಾಗಿ ಎಸ್.ಟಿ ಜಾತಿ ಪ್ರಮಾಣ ಪತ್ರ ಕೊಡಿಸಲು ಕಾಮನಕೇರಿ ಅವರನ್ನು ಹತ್ತಿಕ್ಕಿ ಅಥವಾ ಮುಗಿಸಿ ಬಿಡುವ ಸಂಚು ನಡೆಸಲಾಗಿದೆ ಎಂದು ಹಲ್ಲೆ ಘಟನೆ ಅರುಹುತ್ತದೆ. ಎಸ್.ಟಿ ಸೌಲಭ್ಯ ಎಂದರೆ ಕೇವಲ ಅದು ತಮ್ಮ ಜಾತಿಗೆ ಮಾತ್ರ ಸೇರಿದ್ದು ಎಂಬಂತೆ ಕೆಲವರು ತಳವಾರ ಜಾತಿಗೆ ಕಿರುಕುಳ ಕೊಟ್ಟು ದಬ್ಬಾಳಿಕೆ, ದೌರ್ಜನ್ಯ ನಡೆಸಲು ಮುಂದಾಗಿದ್ದಾರೆ. ಸಂವಿಧಾನಬದ್ಧ ಎಸ್.ಟಿ ಸೌಲಭ್ಯ ಯಾರಿಗೆ ಕೊಡಬೇಕು ಎಂಬುದು ಸರ್ಕಾರಗಳಿಗೆ ಸೇರಿದ ವಿಷಯ. ಈಗಾಗಲೇ ತಾವು ತಳವಾರ ಜಾರಿಗೆ ಎಸ್.ಟಿ ಜಾತಿಪತ್ರ ವಿತರಣೆ ಮಾಡಲು ಆದೇಶ ಮಾಡಿದ್ದೀರಿ. ಸರ್ಕಾರದ ನಡವಳಿಯೂ ಪ್ರಕಟಣೆ ಮಾಡಿದ್ದೀರಿ. ಹೀಗಿರುವಾಗಲೂ ಕೆಲವರು ತಳವಾರ ಜಾತಿಯವರಿಗೆ ಎಸ್.ಟಿ ಜಾತಿಪತ್ರ ನೀಡಬಾರದೆಂದು ಅಧಿಕಾರಿಗಳ‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಎಸ್.ಟಿ ಸೌಲಭ್ಯ ಯಾವುದೇ ಒಂದು ಜಾತಿಗೆ ಸೇರಿದ ಸ್ವತ್ತಲ್ಲಾ. ಸರ್ಕಾರ ಅರ್ಹರಿಗೆ ಸೌಲಭ್ಯ ನೀಡುತ್ತದೆ. ಯಾವುದೇ ಒಂದು ಜಾತಿಗೆ ನೀಡುವ ಸೌಲಭ್ಯ ಮತ್ತೊಂದು ಜಾತಿಯವರು ಪ್ರಶ್ನಿಸುವ ಅಥವಾ ಅಡೆತಡೆಯುಂಟು ಮಾಡುವ ಯಾವ ಹಕ್ಕಿಲ್ಲ. ಹೀಗಾಗಿ ಎಸ್.ಟಿ ಪಟ್ಟಿಗೆ ಸೇರಿರುವ ತಳವಾರ ಜಾತಿಯ ಪರವಾಗಿ ಹಗಲಿರುಳು ಶ್ರಮಿಸುತ್ತಿರುವ ಅಮರೇಶ ಕಾಮನಕೇರಿ ಅವರ ಮೇಲಿನ ಹಲ್ಲೆ ಘಟನೆಯನ್ನು ತಾಲ್ಲೂಕು ಕೋಲಿ ಸಮಾಜವು ಉಗ್ರವಾಗಿ ಖಂಡಿಸುತ್ತದೆ.ಅಮರೇಶ ಕಾಮನಕೇರಿ ಅವರ ಮೇಲಿನ ಹಲ್ಲೆಯು ಕೊಲೆಗೆ ಸಂಚು ಎಂದು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಲ್ಲೆ ಮಾಡಿದ ಗುಂಪಿನ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ನಾಲ್ಕು ದಿನದಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಚಿತ್ತಾಪುರ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಕೋಲಿ ಮತ್ತು ತಳವಾರ ಸಮಾಜದವರು ಎಚ್ಚರಿಸಿದ್ದಾರೆ.


ಇದೇ ಸಂದರ್ಭದಲ್ಲಿ 
ಶರಣು ಡೋಣಗಾಂವ ಸೇರಿದಂತೆ ಕೋಲಿ ಮತ್ತು ತಳವಾರ ಸಮಾಜದ ಹಿರಿಯರು,ಯುವಕರು ಇನ್ನಿತರರು ಉಪಸ್ಥಿತರಿದ್ದರು.

Post a Comment

Previous Post Next Post