ಬಾರಿಕೇರ್ ಓಣಿಯಲ್ಲಿ ಬೊಂಗಾ;ಜೀವ ಭಯದಲ್ಲೇ ಸಾರ್ವಜನಿಕರ ಓಡಾಟ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಡಿಸೆಂಬರ್ 08 : ಪಟ್ಟಣದ 5 ವಾರ್ಡ್ ನ ಬಾರಿಕೇರ್ ಓಣಿಯಲ್ಲಿ ಚರಂಡಿ ನೀರು ಹರಿಯುವ ಜಾಗದಲ್ಲಿ ಬೊಂಗ ಬಿದ್ದಿದ್ದು, ಇದೇ ಮಾರ್ಗವಾಗಿ ಚಿಕ್ಕ ಮಕ್ಕಳು, ವೃದ್ದರು, ಶಾಲಾ ವಿದ್ಯಾರ್ಥಿಗಳು ಭಯದಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಬೊಂಗಾ ಬಿದ್ದಿದ್ದು ಇಲ್ಲಿಯವರೆಗೆ ಪುರಸಭೆಯ ಯಾವ ಅಧಿಕಾರಿಯೂ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪಟ್ಟಣದ 5 ವಾರ್ಡ್ ನ ಬಾರಿಕೇರ್ ಓಣಿಯಲ್ಲಿ ಚರಂಡಿ ನೀರು ಹರಿಯುವ ಜಾಗದಲ್ಲಿ ಬೊಂಗ ಬಿದ್ದಿದ್ದು, ಇದೇ ಮಾರ್ಗವಾಗಿ ಚಿಕ್ಕ ಮಕ್ಕಳು, ವೃದ್ದರು, ಶಾಲಾ ವಿದ್ಯಾರ್ಥಿಗಳು ಭಯದಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಚರಂಡಿ ನೀರು ಹರಿಯುವ ಜಾಗದಲ್ಲಿ ಈ ಬೊಂಗಾ ಬಿದ್ದಿದ್ದು ಇಲ್ಲಿಯವರೆಗೆ ಪುರಸಭೆಯ ಯಾವ ಅಧಿಕಾರಿಯೂ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಈ ಹಿಂದೆಯೂ ಬೊಂಗಾ ಬಿದ್ದಿತ್ತು ಪುರಸಭೆಯ ಅಧಿಕಾರಿಗಳು ಅದನ್ನು ಪರಿಶೀಲಿಸಿ ಕಲ್ಲು ಮಣ್ಣಿಂದ ಮುಚ್ಚಲ್ಪತ್ತಿತ್ತು ಅದೇ ಜಾಗದಲ್ಲಿ ಮತ್ತೆ ಬೊಂಗಾ ಬಿದ್ದಿದ್ದು ಇದನ್ನೂ ಆದಷ್ಟು ಬೇಗನೆ ಮುಚ್ಚಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೂ ಸರಾಗವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ಸಾರ್ವಜನಿಕರ ಒತ್ತಾಯವಾಗಿದೆ.


ಹೇಳಿಕೆ -1

ಹಿಂದಿನ ಕಾಲದಲ್ಲಿ ಜೋಳವನ್ನು ಶೇಖರಣೆ ಮಾಡಲು ಹಗೇವು ತೆಗೆದು ಇಡುತ್ತಿದ್ದ ಜಾಗ ಇದಾಗಿದ್ದು, ಎರಡನೇ ಬಾರಿ ಅದೇ ಜಾಗದಲ್ಲಿ ಬೊಂಗಾ ಬಿದ್ದಿದ್ದು ಆದಷ್ಟು ಬೇಗನೆ ಮುಚ್ಚುವ ಕಾರ್ಯ ಮಾಡುತ್ತೇನೆ ಎಂದು ಮಾದ್ಯಮಕ್ಕೆ ದೂರವಾಣಿ ಕರೆ ಮೂಲಕ ಭರವಸೆ ನೀಡಿದರು.

ಶರಣಯ್ಯ ಸೊಪ್ಪಿಮಠ ಪುರಸಭೆ ಸದಸ್ಯರು,5ನೇ ವಾರ್ಡ್ ಮಸ್ಕಿ


ಹೇಳಿಕೆ -2

ಪದೇ ಪದೇ ಇದೇ ಜಾಗದಲ್ಲೇ ಬೊಂಗಾ ಬೀಳುತ್ತಿದ್ದು ಶಾಶ್ವತ ಪರಿಹಾರ ನೀಡುವ ವ್ಯವಸ್ಥೆ ಪುರಸಭೆ ಕೈಗೊಳ್ಳಬೇಕು ಹಾಗೂ ಇದರಿಂದ ಮುಂದೆ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳ ಬಯಕೆಯಾಗಿದೆ.

ಹೆಸರು ಹೇಳಲು ಇಚ್ಛಿಸದ 5 ನೇ ವಾರ್ಡ್ ನಿವಾಸಿ 

Post a Comment

Previous Post Next Post