UDAYAVANI NEWS
ಮಸ್ಕಿ, ಡಿಸೆಂಬರ್ 09 : ಪಟ್ಟಣದ 5,6,ಮತ್ತು 3 ನೇ ವಾರ್ಡ್ ಗಳಲ್ಲಿ ಹೈಟೆಕ್ ಶೌಚಾಲಯ ವಿದ್ದು ಬಯಲಲ್ಲೇ ಶೌಚಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸಿಸಿ ರಸ್ತೆ ಬಯಲಲ್ಲೇ ಶೌಚಕ್ಕೆ ತೆರಳುವ ಮಹಿಳೆಯರು, ಹೈಟೆಕ್ ಶೌಚಾಲಯ ಇದ್ದು ಇಲ್ಲದಾಗಿವೆ. ಶೌಚ ಮುಕ್ತ ನಗರ ನಿರ್ಮಾಣ ಯಾವಾಗ ? ಎಂಬುದು ಸಾರ್ವಜನಿಕರ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ. ಪುರಸಭೆ ಆಡಳಿತವು ಆದಷ್ಟು ಬೇಗ ಬಯಲು ಮುಕ್ತ ಶೌಚ ನಿರ್ಮಾಣ ವ್ಯವಸ್ಥೆ ಮಾಡಿ ಕೊಡುತ್ತಾ ಎಂದು ಕಾದು ನೋಡಬೇಕಿದೆ ಎಂದು ನಾಗಭೂಷಣ ಬಾರಿಕೇರ್ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಮಸ್ಕಿ UDAYAVANI NEWS ಗೆ ಮಾದ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪುರಸಭೆ ಆಡಳಿತವು ಸಾರ್ವಜನಿಕ ಪತ್ರಿಕಾ ಪ್ರಕಟಣೆ ಆದೇಶದ ಪ್ರಕಾರ ಮಸ್ಕಿ ಪಟ್ಟಣದ ಎಲ್ಲಾ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಮಸ್ಕಿ ಪಟ್ಟಣವನ್ನು ಬಯಲು ಶೌಚ ಮುಕ್ತ ನಗರವೆಂದು ಈಗಾಗಲೇ ಘೋಷಣೆ ಮಾಡಿದ್ದು ಮುಂದು ವರೆದು ODF + ಘೋಷಣೆ ಸಂಬಂಧವಾಗಿ ಮಸ್ಕಿ ವ್ಯಾಪ್ತಿಯ 23 ವಾರ್ಡ್ ಗಳಲ್ಲಿ 01 KSRTC ಇಲಾಖೆಯ 01. ಸಾರ್ವಜನಿಕ ಶೌಚಾಲಯ,05 ಸಮುದಾಯ, 02. ಪೆಟ್ರೋಲ್ ಬಂಕ್ ಶೌಚಾಲಯಗಳನ್ನು ಸಾರ್ವಜನಿಕ ಮುಕ್ತ ಬಳಕೆಗಾಗಿ ಅವಕಾಶ ಕಲ್ಪಿಸಲಾಗಿದೆ ಮತ್ತು ಸ್ವಚ್ಛ ಭಾರತ ಮಿಷನರ್ ಯೋಜನೆಯಡಿಯಲ್ಲಿ 1724 ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ ಗಳನ್ನು ನಿರ್ಮಿಸಿ ಅನುಕೂಲ ಕಲ್ಪಿಸಿದೆ. ಈಗಾಗಿ ಸಾರ್ವಜನಿಕರು ಶೌಚಕ್ಕಾಗಿ ಬಯಲಿಗೆ ಹೋಗುವ ಸಂದರ್ಭ ಇರುವುದಿಲ್ಲ ಕಾರಣ ಮಸ್ಕಿ ಪಟ್ಟಣವನ್ನು ODF+ ಬಯಲು ಶೌಚ ಮುಕ್ತ ನಗರವನ್ನಾಗಿ ಘೋಷಿಸಲು ಯೋಗ್ಯ ಕ್ರಮಗಳನ್ನು ಈ ಮೂಲಕ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಸ್ಕಿ ಪುರಸಭೆ ಕಾರ್ಯಾಲಯ ವತಿಯಿಂದ ಪ್ರಕಟಿಸಲಾಗಿತ್ತು. ಈ ಪ್ರಕಟಣೆಗೆ ವಿರುದ್ದದಂತೆ ಈಗಲೂ ಪಟ್ಟಣದಾದ್ಯಂತ 3,5,6ನೇ ವಾರ್ಡ ನ ಜನತೆಯು ಹೈಟೆಕ್ ಶೌಚಾಲಯಗಳಿದ್ದರೂ ಬಯಲಲ್ಲೇ ಶೌಚಕ್ಕೆ ಹೋಗುವ ಸಂದರ್ಭ ಬಂದೊದಗಿದೆ. ಹಾಗೂ ಹಳ್ಳಿಗಾಡು ಪ್ರದೇಶದಿಂದ ಪಟ್ಟಣಕ್ಕೆ ಬರುವ ಮಹಿಳೆಯರ ಸಮಸ್ಯೆಯಂತು ಕೇಳಬಾರದು.ಪ್ರತಿ ನಿತ್ಯವೂ ಕೇಂದ್ರ ಶಾಲೆಯ ಹಿಂಬದಿಯ ಮಾರ್ಗವಾಗಿ 3 ಮತ್ತು 4ನೇ ವಾರ್ಡ್ ನ ನಿವಾಸಿಗಳು ಹಾಗೂ ಸಾರ್ವಜನಿಕರು ತೆರಳುವ ಮುಖ್ಯ ರಸ್ತೆಯಲ್ಲಿಯೇ ಮಹಿಳೆಯರು ತಂಬಿಗೆಯನ್ನು ಹಿಡಿದುಕೊಂಡು ಹೋಗುವದು ವಾಡಿಕೆಯಾಗಿಬಿಟ್ಟಿದೆ.ಇದರಿಂದ ಈ ಭಾಗದ ಮಹಿಳೆಯರು ಬಹಳ ಮುಜುಗರದಲ್ಲಿಯೇ ಶೌಚಕ್ಕೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ 5,6 ವಾರ್ಡ್ ನಲ್ಲಿ 3 ಶೌಚಾಲಯವಿದ್ದರು ಜಂಗಲ್ ಬೆಳೆದು ಇಲ್ಲ,ನೀರಿನ ವ್ಯವಸ್ಥೆ ಇಲ್ಲದೆ ಉಪಯೋಗಕ್ಕೆ ಬಾರದಾಗಿವೆ. ಒಟ್ಟಿನಲ್ಲಿ ಪುರಸಭೆಯು ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸಿದೆ ವಿನಹ ಯಾವುದೇ ರೀತಿಯ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆ ಇಲ್ಲದಾಗಿದೆ. ಪಟ್ಟಣದ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಯನ್ನು ಪುರಸಭೆ ಆಡಳಿತವು ಗಂಭೀರವಾಗಿ ಪರಿಗಣಿಸಿ ಸರಿಪಡಿಸುವ ಕೆಲಸ ಮಾಡುತ್ತಾ ಎಂದು ಕಾದು ನೋಡಬೇಕಿದೆ ಎಂದು ನಾಗಭೂಷಣ ಬಾರಿಕೇರ್ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಮಸ್ಕಿ ಇವರು UDAYAVANI NEWS ಗೆ ಮಾದ್ಯಮ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Tags
ಜಿಲ್ಲಾ ಸುದ್ದಿಗಳು