UDAYAVANI NEWS
ರಾಯಚೂರು,ಡಿಸೆಂಬರ್ 13 : ಇಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ ಅಂತರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿಯ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಬಿ.ಆರ್.ಬಿ ಕಾಲೇಜು ರಾಯಚೂರು ಕಾಲೇಜಿನಲ್ಲಿ ಜರುಗಿತು.
ಇಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ ಅಂತರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿಯ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಶ್ರೀಮತಿ ಡಾ.ಶೀಲಾದಾಸ್ ಪ್ರಾಂಶುಪಾಲರು ಬಿ.ಆರ್.ಬಿ ಕಾಲೇಜು ರಾಯಚೂರು ಹಾಗೂ ಉಪಾಧ್ಯಕ್ಷರು ಜಿಲ್ಲಾ ಸಂಸ್ಥೆ ರಾಯಚೂರು ರವರ ಅಧ್ಯಕ್ಷತೆಯಲ್ಲಿ ಈ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿತ್ತು.
ಮೊದಲಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾರ್ಥನೆ ಗೀತೆಯನ್ನು ಸಾಮೂಹಿಕವಾಗಿ ಹಾಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ನಂತರ ಶ್ರೀಮತಿ ಅಜೀಜಾ ಸುಲ್ತಾನಾ ಜಿಲ್ಲಾ ಮುಖ್ಯ ಆಯುಕ್ತರು ರಾಯಚೂರು ರವರು ಕಾರ್ಯಾಗಾರವನ್ನು ಉದ್ಘಾಟಿಸಿ ಸ್ಕೌಟಿಂಗ್-ಗೈಡಿಂಗ್ ಚಳುವಳಿಯ ಬಗ್ಗೆ ಮಾಹಿತಿ ನೀಡಿದರು. ಶ್ರೀ ಅಂಬಣ್ಣ ನಾಯಕ ಮ್ಯಾಕಲ್ ಎಸ್.ಜಿ.ವಿ/ಎಸ್.ಎಮ್.ಸಿ ರವರು ಜಾಂಬೂರಿಯ ಪೂರ್ವ ತಯಾರಿ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಆರ್. ಎಚ್. ಸಾಗರ್ ಅಧ್ಯಕ್ಷರು ಸ್ಥಳೀಯ ಸಂಸ್ಥೆ ರಾಯಚೂರು, ರೋವರ್ ಸ್ಕೌಟ್ ಲೀಡರ್ ರಾದ ಡಾ.ಪ್ರಶಾಂತ ಕುಮಾರ್,ಡಾ.ಸಂಪತ್ತು ಕುಮಾರ್, ವೆಂಕಟೇಶ, ವೈ.ನರಸಿಂಹ ಹಾಗೂ ರೇಂಜರ್ ಲೀಡರ್ ರಾದ ಶ್ರೀಮತಿ ರವಳಿಕಾ,ಡಾ.ವಿಜಯಲಕ್ಷ್ಮಿ ಮತ್ತು ರೋವರ್ಸ್, ರೇಂಜರ್ಸ್ ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು