UDAYAVANI NEWS
ಮಸ್ಕಿ, ಡಿಸೆಂಬರ್ 13 : ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಯಮನೂರು ಮುರಾರಿ ಎಂಬ 6 ವರ್ಷದ ಬಾಲಕನು ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಹರಿಹರ ದಿಂದ ಫ್ರೀಡಂ ಪಾರ್ಕ್ ಗೆ ಕಾಲ್ನಡಿಗೆಯ ಜಾಥಾ ದಲ್ಲಿ 3 ದಿನ ಹೆಜ್ಜೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರ ಬಾಲಕನ ತಂದೆ ಮಾದ್ಯಮ ಹೇಳಿಕೆ ನೀಡಿದ್ದಾರೆ.
ಸಿದ್ದು ಮುರಾರಿ ಮತ್ತು ನಿಂಗಮ್ಮ ಎಂಬ ದಂಪತಿಯ ಮಗನಾದ ಯಮನೂರು ಮುರಾರಿಯು ಕರ್ನಾಟಕ ಪಬ್ಲಿಕ್ ಸ್ಕೂಲ್ ಪಿ ಡಬ್ಲ್ಯೂ ಡಿ ಕ್ಯಾಂಪ್ ಮಸ್ಕಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಬಾಲಕ ನವೆಂಬರ್ 28 ರಿಂದ ಹರಿಹರ ದಿಂದ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಕೈಗೊಂಡ ವಿಷಯ ತಿಳಿಯುತ್ತಿದ್ದಂತೆಯೇ ಈ ಬಾಲಕ ನಾನು ಕೂಡಾ ಒಳ ಮೀಸಲಾತಿ ಹೋರಾಟದಲ್ಲಿ ಭಾಗವಹಿಸುತ್ತೇನೆ ಎಂದ್ದು ತಂದೆಯೊಂದಿಗೆ ದುಂಬಾಲು ಬಿದ್ದು, ಹಠವಿದ್ದರು ಹೋರಾಟದಲ್ಲಿ ಭಾಗವಹಿಸಲೇಬೇಕು ಎಂಬ ಛಲದಿಂದ ಮಸ್ಕಿ ಯಿಂದ ಪಾದಯಾತ್ರೆ ಹೋರಾಟದ ದಂಡು ಇರುವ ಕಡೆ 09-12-2022 ಶುಕ್ರವಾರ ಬೆಳಿಗ್ಗೆ ತೆರಳಿ ಸತತ ಮೂರು ದಿನಗಳ ಕಾಲ ಮಳೆ, ಚಳಿ ಹಸಿವು ಎನ್ನದೆ ಪಾದಯಾತ್ರೆಯಲ್ಲಿ ಭಾಗವಹಿಸಿ ಅತೀ ಚಿಕ್ಕ ವಯಸ್ಸಿನ ಬಾಲಕ ಪಾದಯಾತ್ರೆ ಯಲ್ಲಿ ಭಾಗವಹಿಸಿರುವುದು ಇದೇ ಮೊದಲ ಬಾರಿ ಎಂದು ಹೋರಾಟಗಾರರು ಎಲ್ಲರೂ ಮುದ್ದಾಡುವ ಮೂಲಕ ಪ್ರೀತಿಯಿಂದ ಹೆಗಲ ಮೇಲೆ ಎತ್ತಿಕೊಂಡು, ಅಪ್ಪಿಕೊಂಡು ಕಾಳಜಿ ವಹಿಸಿ ಸಭೆ ಸಮಾರಂಭಗಳಲ್ಲಿ ಸನ್ಮಾನಗಳ ಮಹಾಪೂರವೇ ಹರಿದುಬಂದಿದೆ.
ಪ್ರೀತಿ ತೋರಿದ ಸರ್ವರಿಗೂ ನನ್ನ ಭೀಮ ವಂದನೆಗಳು,ನನ್ನ ಮಗನ ಮೇಲೆ ಪ್ರೀತಿ ತೋರಿದ ನನ್ನ ಸಮುದಾಯಕ್ಕೆ ಅಭಾರಿಯಾಗಿರುತ್ತೇನೆ. ನಮ್ಮ ಪರಿಶಿಷ್ಠ ಜಾತಿಯ ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಫ್ರೀಡಂ ಪಾರ್ಕಿನಲ್ಲಿ ಇದೇ ಡಿಸೆಂಬರ್ 28 ರ ವರೆಗೂ ಧರಣಿ ಮಾಡುತ್ತಿರುವ ನನ್ನ ಪ್ರೀತಿಯ ಸಹೋದರ-ಸಹೋದರಿಯರೆಲ್ಲರಿಗೂ ಈ ಹೋರಾಟವು ಶಾಂತಿಯುತವಾಗಿ ಜರುಗಲಿ ಹಾಗೂ ಯಶಸ್ವಿಯಾಗಲಿ ಎಂದು UDAYAVANI NEWS ಮಾದ್ಯಮದ ಮೂಲಕ ಬಾಲಕನ ತಂದೆ ಸಿದ್ದು ಮುರಾರಿ ರವರು ಶುಭ ಆರೈಸಿದ್ದಾರೆ.
Tags
ಜಿಲ್ಲಾ ಸುದ್ದಿಗಳು