ಸಂವಿಧಾನ ಪ್ರಜಾಪ್ರಭುತ್ವ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ; ಡಿ.6 ರಂದು ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ-ಎಂ.ಬಿ ಮಾರೆಪ್ಪ ಮಾಚನೂರು

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಸಿರವಾರ, ಡಿಸೆಂಬರ್ 03 : ಸಂವಿಧಾನದ ವಿರೋಧ ದೋರಣೆಗಳನ್ನು ಪ್ರದರ್ಶಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ,ಸಾಂಸ್ಕೃತಿ ಕ ಪ್ರತಿರೋಧ ಒಡ್ಡಲು ಇದೆ ತಿಂಗಳು ಡಿ.6 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ ರವರ 66ನೇ ಪರಿನಿಬ್ಬಾಣ ದಿನ ಅಂಗವಾಗಿ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ ಬೆಂಗಳೂರು ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿಜಿ ಸಾಗರ ಬಣ ಜಿಲ್ಲಾ ಸಂಚಾಲಕ ಎಂ.ಬಿ ಮಾರೆಪ್ಪ ಮಾಚನೂರು ಹೇಳಿದರು.

ಅವರು ಸುದ್ದಿಗರಾರೊಂದಿಗೆ ಮಾತನಾಡಿ, ಆಹಾರ, ಬಟ್ಟೆ, ಭಾಷೆ,ಬಣ್ಣದ ಹೆಸರಿನಲ್ಲಿ ಆಳುವ ಸರ್ಕಾರಗಳು ದಬ್ಬಾಳಿಕೆ ಮಾಡುತ್ತಿವೆ. ದಲಿತರ ಮೇಲೆ ದೌರ್ಜನ್ಯ, ಕೋಮು ಭಾವನೆ ಕೆರಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿವೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳು ಶಿಷ್ಯವೇತನ ಕಡಿತದಿಂದ ಹಿಡಿದು ದುಡಿಯುವ ವರ್ಗಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತಡೆಯಲು ಸಾಂಸ್ಕೃತಿಕ ಪ್ರತಿರೋಧ ಒಡ್ಡಬೇಕಾದ ಅನಿವಾರ್ಯತೆ ಇದೆ ಹಾಗಾಗಿ ದಲಿತ ಸಂಘಟನೆಗಳನ್ನು ಒಗ್ಗೂಡಿಸುವ ಐಕ್ಯತಾ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ದಲಿತ ಪ್ರಗತಿಪರ ಸಂಘಟನೆಗಳು ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

Post a Comment

Previous Post Next Post