ಹೊಸ ವರ್ಷಾಚರಣೆಗಾಗಿ ಒರಿಸ್ಸಾ ಕಾಡಿನಿಂದ ತಂದಿದ್ದ 35 ಲಕ್ಷ ಬೆಲೆಬಾಳುವ 263 ಕೆ.ಜಿ.ಗಾಂಜಾ ಮೂಟೆಗಳನ್ನು ಪೆಡ್ಲರ್ ಸಮೇತ ವಶಕ್ಕೆ ಪಡೆದು ಬಂಧಿಸಿ ಜೈಲಿಗಟ್ಟಿದ ಕೋಣನಕುಂಟೆ ಪೊಲೀಸ್ ಸಿಬ್ಬಂದಿ!



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು ಡಿಸೆಂಬರ್ 26 : 2023ನ್ನು ಅದ್ದೂರಿ ರೇವ್ ಪಾರ್ಟಿ, ಡ್ರಗ್ಸ್ ಮತ್ತಿನೊಂದಿಗೆ ಸ್ವಾಗತಿಸಲು ಸಿದ್ದತೆ ನಡೆಸಿರುವ ಬೆಂಗಳೂರು ನಗರದ ಹಲವು ಕ್ಲಬ್-ಪಬ್, ಡಾನ್ಸ್ ಬಾರ್ ಗಳು, ಡಿಸ್ಕೋತೆಕ್, ಐಷಾರಾಮಿ ಸ್ಟಾರ್ ಹೋಟೆಲ್ ಗಳು ಆಧುನಿಕ MDMA ಡ್ರಗ್ಸ್ ಮಾತ್ರೆ, LSD ಸ್ಸ್ಟಾಂಪ್ ಪೇಪರ್, ಆಶಿಷ್ ಆಯಿಲ್, ಚರಸ್, ಅಫೀಮುಗಳ ಜೊತೆಗೆ ದೇಶಿ ಗಾಂಜಾ ಮತ್ತಿನಲ್ಲಿ ಯುವಜನರನ್ನು ತೇಲಿಸಿ ದುಡ್ಡು ಬಾಚಲು ತುದಿಗಾಲಲ್ಲಿ ನಿಂತಿದ್ದಾರೆ! ಅದಕ್ಕಾಗಿಯೇ ಬೇರೆ ಬೇರೆ ರಾಜ್ಯಗಳಿಂದ ರಾತ್ರೋರಾತ್ರಿ ಗೂಡ್ಸ್ ಗಾಡಿಗಳಲ್ಲಿ ಟನ್ ಗಟ್ಟಲೆ ಗಾಂಜಾ ಸೊಪ್ಪು ಬಂದು ಬೆಂಗಳೂರಿನ ಗುಪ್ತ ಗೋಡೌನ್ ಗಳಲ್ಲಿ ಸೇರುತ್ತಿರುವುದು ಭರ್ಜರಿಯಾಗಿ ಬಿಸಿದೋಸೆಯಂತೆ ಬೆಂಗಳೂರಿನ ಬೀದಿಗಳಲ್ಲಿ ಮಾರಾಟ ವಾಗುತ್ತಿರುವುದು ಬೆಳಕಿಗೆ ಬರುತ್ತಿವೆ! ಈಗ ಮತ್ತೆ ಚೀನಾದ ಕೋವಿಡ್ ರೂಪಾಂತರಿ ವೈರಾಣು BF.7 ಭಾರತಕ್ಕೆ ಲಗ್ಗೆ ಇಡುವ ಎಲ್ಲಾ ಲಕ್ಷಣಗಳೂ ಇರುವುದರಿಂದ ಕೇಂದ್ರ ಸರ್ಕಾರ ದೇಶಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ. ಈ ಬಾರಿ ಹೊಸ ವರ್ಷಾಚರಣೆಗೆ ಕಡಿವಾಣ ಬೀಳುವ ಸಾಧ್ಯತೆಯೂ ಇದೆ. ಹಾಗಿದ್ದರೂ ಬೆಂಗಳೂರಿನಲ್ಲಿ 50ಸಾವಿರ ಹೋಟೆಲ್ ರೂಂ ಬುಕ್ ಆಗಿವೆಯಂತೇ! 90% ಸ್ಟಾರ್ ಹೋಟೆಲ್ ಗಳಲ್ಲಿ ಬರದಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಅದ್ದೂರಿ ಸಿದ್ದತೆ ನಡೆದಿದೆ! ಹೀಗಿರುವಾಗಲೇ ಕರ್ನಾಟಕದ ರಾಜಧಾನಿಯಲ್ಲೂ ಹೊಸ ವರ್ಷದ ಖುಷಿಯ ಗುಂಗಿನಲ್ಲಿ ಹಣವಂತರು ತೇಲಾಡಲು ಗಾಂಜಾ ಸೊಪ್ಪಿನ ಮೂಟೆಗಳು ದೂರದ ಒರಿಸ್ಸಾ ಕಾಡಿನಿಂದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಪಿಳ್ಳಗಾನಹಳ್ಳಿಗೂ ಬಂದಿಳಿದ ಸೀಕ್ರೆಟ್ ಭೇದಿಸಿರುವ ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸರು, ಹಗಲು ರಾತ್ರಿ ಎನ್ನದೆ ನಿದ್ದೆಗೆಟ್ಟು ಕಾರ್ಯಾಚರಣೆ ನಡೆಸಿ, ನೂರಾರು ಕಿಲೋಮೀಟರ್ ಓಡಾಡೀ, ನಕ್ಸಲ್ ಪೀಡಿತ ಒರಿಸ್ಸಾ ಕಾಡಿನಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಬಹುದೊಡ್ಡ 
ರಾಕೆಟ್ ಬೇಧಿಸಿ, ಪ್ರಾಣದ ಹಂಗು ತೊರೆದು 35 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಸೊಪ್ಪನ್ನು ವಸಪಡಿಕೊಂಡಿದ್ದಾರೆ. ಸುಮಾರು 263. ಕೆಜಿ 700ಗ್ರಾಂ ನಷ್ಟಿದ್ದ ದೇಶಿ ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ಗಾಂಜಾ ಪೆಡ್ಲರ್ ಗಳನ್ನು ಹೆಡೆಮುರಿ ಕಟ್ಟಿ ತಂದು NDPS Act 1985 ರೀತ್ಯಾ ಕೇಸು ದಾಖಲಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತಳ್ಳಿದ್ದಾರೆ!ಮಾದಕ ವಸ್ತು ಪತ್ತೆ ಕಾರ್ಯದಲ್ಲಿ ಸದಾ ಮುಂದಿರುವ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು, ದಕ್ಷಿಣ ವಿಭಾಗದ ಉಪ ಆಯುಕ್ತರಾದ ಪಿ.ಕ್ರಷ್ಣಕಾಂತ್, ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ಎನ್.ಪವನ್ ಕುಮಾರ್ ಸಹಾಯ ಪೊಲೀಸ್ ಕಮಿಷನರ್ ಸುಬ್ರಹ್ಮಣ್ಯಪುರ, ಉಪ ವಿಭಾಗ ಇವರ ನೇತೃತ್ವದಲ್ಲಿ, ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ಶಿವಕುಮಾರ್ ರವರ ಉಸ್ತುವಾರಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಪಿ.ಎಸ್ಐ.ಆರುಣ್ ಕುಮಾರ್, ಪಿ.ಎಸ್ಐ.ಸುಹಾಸ್, ಹೆಡ್ ಕಾನ್ಸ್ಟೇಬಲ್ ಗಳಾದ ಸೈಯದ್ ಮುಸ್ತಫಾ, ಶಿವಸ್ವಾಮಿ, ಇಲಿಯಾಝ್ ಖಾನ್, ಶೈಲೇಶ್, ದುಂಡಪ್ಪ, ತಿಪ್ಪಾಶೆಟ್ಟಿ, ರಮೇಶ್, ನರಸಿಂಹ ಬಾಬು, ಅನಿಲ್ ಕುಮಾರ್, ಚೇತನ್ ಚೌಹಾಣ್, ಡಿಲ್ ಕುಮಾರ್, ರಾಘವೇಂದ್ರ ಕಿಲಿಕೈ , ರಮೇಶ್ ನೇತೃತ್ವದಲ್ಲಿ ದಾಳಿ ನಡೆಸಿಲಾಗಿ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪಿಳ್ಳಗಾನಹಳ್ಳಿಯ ಬಿ.ಎಂ.ಟಿ.ಸಿ. ಡಿಪೋ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿರುವ ಪಾಳುಬಿದ್ದ ಮನೆಯಲ್ಲಿ ಇಬ್ಬರು ಅಪರಿಚಿತ ಆಸಾಮಿಗಳು ಗಾಂಜಾ ಸೊಪ್ಪಿನ ಮೂಟೆಗಳ ಸಮೇತ ಸಾಗಾಟಕ್ಕೆ-ಮಾರಾಟಕ್ಕೆ ಯತ್ನಿಸುತ್ತಿದ್ದುದ್ದು ಕಂಡುಬಂದಿದೆ! ಆಗ ಆ ಇಬ್ಬರು ಗಾಂಜಾ ಪೆಡ್ಲರ್ ಗಳನ್ನು ಹೆಡೆಮುರಿ ಕಟ್ಟಿ ಠಾಣೆಗೆ ತಂದು ತನಿಖೆ ನಡೆಸಿದಾಗ, ಈ ಇಬ್ಬರು ಗಾಂಜಾ ಮಾರಾಟಗಾರರು ದೂರದ ಒರಿಸ್ಸಾ ರಾಜ್ಯದ ಗಂಜಾಂ ಜಿಲ್ಲೆಯ ಬಿಜಯನಗರಗಡ ಎಂಬ ಗ್ರಾಮ ದವರಾಗಿದ್ದು, ಆಲ್ಲಿನ ನಕ್ಸಲ್ ಪೀಡಿತ ಪ್ರದೇಶಗಳ ಕಾಡುಗಳಲ್ಲಿ ಸ್ಮಗ್ಲಿಂಗ್ ಉದ್ದೇಶದಿಂದಲೇ, ಅಕ್ರಮವಾಗಿ ಬೆಳೆಯುವ ಗಾಂಜಾ ಸೊಪ್ಪನ್ನು ಕರ್ನಾಟಕಕ್ಕೆ ಗೂಡ್ಸ್ ಗಾಡಿಗಳಲ್ಲಿ ತಂದು ಮಾರಾಟ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ! ಆಂಧ್ರಪ್ರದೇಶದ ಗಡಿಭಾಗದ ಕಾಡುಗಳಿಂದಲೂ ಹಣಮಾಡುವ ಉದ್ದೇಶದಿಂದ ನಿರಂತರವಾಗಿ ಈ ಇಬ್ಬರು ಗಾಂಜಾ ಸೊಪ್ಪನ್ನು ತಂದು ಇಲ್ಲಿನ ಪ್ರಮುಖ ಪೆಡ್ಲರ್ ಗಳ ಮೂಲಕ, ಹರಾಜಿಗಿಡುತಿದ್ದರಂತೆ. ಇಂತಹ ಖತರ್ನಾಕ್ ಗಾಂಜಾ ಪೆಡ್ಲರ್ ಗಳನ್ನು ಬಂಧಿಸಿರುವ ಕೋಣನಕುಂಟೆ ಠಾಣೆಯ ಪೊಲೀಸರ ಕಾರ್ಯಾಚರಣೆಯನ್ನು ಬೆಂಗಳೂರಿನ ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ದಿ ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ರವರು ಅಭಿನಂದಿಸಿದ್ದಾರೆ.

Post a Comment

Previous Post Next Post