UDAYAVANI NEWS
ಮಸ್ಕಿ, ಡಿಸೆಂಬರ್ 21 : ಪಟ್ಟಣದ ಮಲ್ಲಿಕಾರ್ಜುನ ನೆಕ್ಕಂಟಿ ಪ್ರಥಮ ದರ್ಜೆ ಗುತ್ತಿಗೆದಾರರ ನಿವಾಸದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಯವರು ಒಂದು ಹೊಸ ಪಕ್ಷ ಸ್ಥಾಪಿಸುವುದು ಹೆಚ್ಚು ಕಡಿಮೆ ಖಚಿತವಾಗಿದೆ. ಹಾಗೆಯೇ ಹೊಸ ರಾಜಕೀಯದ ಹಾದಿಯ ಬಗ್ಗೆ ಡಿ.25 ರಂದೇ ತಿಳಿಸಲಿದ್ದಾರೆ ಎಂದು ಗಣಿ ಧಣಿ ಜನಾರ್ಧನ ರೆಡ್ಡಿ ಮಾದ್ಯಮ ಹೇಳಿಕೆ ಮೂಲಕ ಸುಳಿವು ನೀಡಿದ್ದಾರೆ.
ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ನೆಕ್ಕಂಟಿ ಪ್ರಥಮ ದರ್ಜೆ ಗುತ್ತಿಗೆದಾರರ ನಿವಾಸದಲ್ಲಿ ರೆಡ್ಡಿಯವರನ್ನು ಬೆಂಬಲಿಗರು ಸನ್ಮಾನಿಸುವ ಸಂದರ್ಭದಲ್ಲಿ ಹೊಸ ಪಕ್ಷ ರಚನೆಗೆ ಖಚಿತವಾದ ಸುಳಿವು ಸಿಕ್ಕಿತು. ರಾಯಚೂರು ಭಾಗದಲ್ಲಿ ರೆಡ್ಡಿಯವರ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಆಯ್ಕೆ ಕೆಲಸವೂ ಜಾರಿಯಲ್ಲಿದೆ. ರೆಡ್ಡಿಯವರ ಆಪ್ತರಲ್ಲಿ ಒಬ್ಬರಾಗಿರುವ ಮಲ್ಲಣ್ಣ ನಾಗರಬೆಂಚಿ ಎನ್ನುವವರು ಗುಂಪಿನಲ್ಲಿದ್ದ ಉದ್ಯಮಿ ಮಲ್ಲಿಕಾರ್ಜುನರನ್ನು ಮುಂದೆ ಕರೆಯುವಾಗ,ಪಕ್ಷದ ಅಭ್ಯರ್ಥಿಯಾಗಲಿರುವ ನೀವೇ ದೂರ ನಿಂತುಬಿಟ್ಟರೆ ಹೇಗೆ ಎನ್ನುತ್ತಾ ಪಕ್ಕದಲ್ಲೇ ಕೂರಿಸಿಕೊಂಡರು.ಇದೇ ಡಿಸೆಂಬರ್ 25 ರಂದು ಹೊಸ ಪಕ್ಷ ಕಟ್ಟುವ ಸುಳಿವು ಹಾಗೂ ರಾಜಕೀಯದ ಕುರಿತು ಮಹತ್ವದ ಸೂಚನೆ ನೀಡುವ ದಿನವಾಗಿದೆ. ಮಾದ್ಯಮದವರು ಮೇಲಿಂದ ಮೇಲೆ ಕೇಳಿದ ಪ್ರಶ್ನೆಗಳಿಗೆ 25 ರಂದೆ ಹೇಳುವೆ ಎಂದು ಜಾರಿಕೊಂಡರು.ನಂತರ ಮಾಧ್ಯಮದವರನ್ನು ಹಾಗೂ ತಮ್ಮ ಅಭಿಮಾನಿಗಳನ್ನು ಪರಿಚಯಿಸಿಕೊಂಡರು.
Tags
ಜಿಲ್ಲಾ ಸುದ್ದಿಗಳು